ಲಂಡನ್: ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಪ್ರಭಲ ಸ್ಪರ್ಧಿಯಾಗಿರುವ ಇಂಗ್ಲೆಂಡ್ ತಂಡ 30 ವರ್ಷಗಳ ಹಿಂದೆ ತೊಟ್ಟಿದ್ದ ಜರ್ಸಿಯನ್ನು ಪುನರ್ ಆಯ್ಕೆ ಮಾಡಿಕೊಂಡು ವಿಶ್ವಯುದ್ದಕ್ಕೆ ಕಣಕ್ಕಿಯಲಿದೆ.
ಇಂಗ್ಲೆಂಡ್ ತಂಡ 1992 ರಲ್ಲಿ ವಿಶ್ವಕಪ್ನಲ್ಲಿ ತೊಟ್ಟಿದ್ದ ಆಕಾಶ ನೀಲಿ ಬಣ್ಣದ ಜರ್ಸಿಯನ್ನು 2019 ವಿಶ್ವಕಪ್ನಲ್ಲಿ ತೊಟ್ಟು ಆಡಲು ನಿರ್ಧರಿಸಿದ್ದಾರೆ, ಏಕೆಂದರೆ 1992 ವಿಶ್ವಕಪ್ನಲ್ಲಿ ಆಂಗ್ಲಪಡೆ ಫೈನಲ್ ಪ್ರವೇಶಿಸಿತ್ತು. ಆಂದು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿತ್ತು. ಆದರೆ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿ ರನ್ನರ್ ಆಫ್ಗೆ ತೃಪ್ತಿಪಟ್ಟುಕೊಂಡಿತ್ತು.
ಹೊಸ ಜರ್ಸಿ ಬಿಡುಗಡೆಗೊಳಿಸಿ ಟ್ವೀಟ್ ಮಾಡಿರುವ ಇಸಿಬಿ, ತಮ್ಮ ವಿಶ್ವಕಪ್ನ ಕಿಟ್ ಹೇಗಿದೆ ಎಂದು ಪ್ರಮುಖ ಆಟಗಾರರಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ.
ಕಳೆದ 5 ವರ್ಷಗಳಿಂದ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಮಾರ್ಗನ್ ಪಡೆ ಬ್ಯಾಟಿಂಗ್ನಲ್ಲಿ ಬೈರ್ಸ್ಟೋವ್, ರಾಯ್, ರೂಟ್, ಬಟ್ಲರ್, ಬೌಲಿಂಗ್ನಲ್ಲಿ ಆರ್ಚರ್, ವೋಕ್ಸ್, ಮಾರ್ಕ್ವುಡ್ ಹಾಗೂ ಬೆನ್ಸ್ ಸ್ಟೋಕ್ಸ್, ಮೊಯಿನ್ ಅಲಿಯಂತಹ ಆಲ್ರೌಂಡರ್ಗಳನ್ನು ಹೊಂದಿದ್ದು ಈ ಬಾರಿ ತವರಿನ ಲಾಭ ಪಡೆದು ತಮ್ಮ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿಯಲು ಕಾತುರದಿಂದ ಕಾಯುತ್ತಿದ್ದಾರೆ,
ಇಂಗ್ಲೆಂಡ್ ಮೇ 30ರಂದು 2019ರ ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ದ. ಆಫ್ರಿಕಾ ವಿರುದ್ಧ ಆಡಲಿದೆ.