ಕರ್ನಾಟಕ

karnataka

ETV Bharat / briefs

ಅಭಿಮಾನಿ ಜೊತೆ ಧೋನಿ ನಡೆದುಕೊಂಡ ರೀತಿಗೆ ಟ್ವಿಟ್ಟಿಗರಿಂದ ಮೆಚ್ಚುಗೆ - ಅಭಿಮಾನಿ

ದೇಶಕ್ಕೆ ಐಸಿಸಿಯ ಎಲ್ಲಾ ಪ್ರಶಸ್ತಿಗಳನ್ನು ತಂದುಕೊಟ್ಟಿರುವ ಧೋನಿ ತಮ್ಮ ಚಾಣಾಕ್ಷ ನಾಯಕತ್ವ, ಗೇಮ್​ ಫಿನಿಶಿಂಗ್​ ಜೊತೆಗೆ ಅಭಿಮಾನಿಗಳೊಂದಿಗೆ ನಡೆದುಕೊಳ್ಳುವ ರೀತಿಗೆ ಹೆಚ್ಚು ಪ್ರಸಿದ್ದಿಯಾಗಿದ್ದಾರೆ.ನಿನ್ನೆ ವಾಂಖೆಡೆ ಕೂಡ ಅಂತಹ ಒಂದು ಘಟನೆಗೆ ಸಾಕ್ಷಿಯಾಗಿದೆ.

ಧೋನಿ

By

Published : Apr 4, 2019, 9:42 PM IST

ಮುಂಬೈ: ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕನಾಗಿರುವ ಧೋನಿಗೆ ಕೇವಲ ಚೆನ್ನೈನಲ್ಲಿ ಮಾತ್ರವಲ್ಲದೆ ಇಡೀ ದೇಶದ ತುಂಬೆಲ್ಲಾ ಅಭಿಮಾನಿಗಳಿದ್ದಾರೆ.

ನಿನ್ನೆ ಮುಂಬೈ ಇಂಡಿಯನ್ಸ್​ ವಿರುದ್ಧ ವಾಂಖೆಡೆಯಲ್ಲಿ ಪಂದ್ಯ ಮುಗಿದ ನಂತರ ಧೋನಿಯ ಅಭಿಮಾನಿಯಾಗಿರುವ ಸುಮಾರು 60 ವರ್ಷದಾಟಿರುವ ಮಹಿಳೆಯೊಬ್ಬರು ಧೋನಿಯನ್ನು ಭೇಟಿಯಾಗಲು ಕಾದು ಕುಳಿತಿದ್ದರು.

ಧೋನಿ ನಂತರ ತಮಗಾಗಿ ಕಾಯುತ್ತಿದ್ದ ಅಭಿಮಾನಿಯನ್ನು ಭೇಟಿ ಮಾಡಿ,ಅವರ ಜೊತೆ ಸ್ವಲ್ಪ ಸಮಯ ಮಾತನಾಡಿದ್ದಾರೆ. ಆ ಮಹಿಳೆ ತಂದಿದ್ದ ತಮ್ಮದೇ 7ನೇ ನಂಬರ್​ ಜರ್ಸಿಗೆ ಹಸ್ಥಾಕ್ಷರ ನೀಡಿ, ಆ ಮಹಿಳೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಧೋನಿ ತಮ್ಮ ಅಭಿಮಾನಿ ಜೊತೆ ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಧೋನಿ ಕ್ರಿಕೆಟ್​ ಆಟ ಇನ್ನು ಕೆಲವೇ ತಿಂಗಳುಗಳಲ್ಲಿ ಮುಗಿಯಬಹುದು ಆದರೆ ಧೋನಿ ಮೇಲೆ ಕೋಟ್ಯಾಂತರ ಅಭಿಮಾನಿಗಳಿಗಿರುವ ಅಭಿಮಾನ,ಗೌರವ ಪ್ರೀತಿ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ ಎನ್ನುವುದಕ್ಕೆ ನಿನ್ನೆ ನಡೆದ ಘಟನೆ ಸಾಕ್ಷಿ.

ಕೆಲವು ದಿನಗಳ ಹಿಂದೆಯಷ್ಟೇ ಧೋನಿ ಅಭ್ಯಾಸ ಪಂದ್ಯವಾಡುವುದನ್ನು ನೋಡಲು 25 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ABOUT THE AUTHOR

...view details