ಲಂಡನ್: ಲಂಡನ್ನ ಓವೆಲ್ನಲ್ಲಿ ಭಾರತ-ಆಸ್ಟ್ರೇಲಿಯಾ ವಿರುದ್ಧ ಪಂದ್ಯಕ್ಕೂ ಮುನ್ನ ಭಾರತ ತಂಡದ ನಾಯಕ ಕೊಹ್ಲಿಗೆ ಬಾಲ್ಯದಲ್ಲಿ ಕ್ರಿಕೆಟ್ ಆಡಿದ ಜಾಗದ ಮಣ್ಣನ್ನು ವಿಶಾಲ್ ಭಾರತಿ ಸ್ಕೂಲ್ ಲಂಡನ್‌ಗೆ ಪಾರ್ಸೆಲ್ ಮೂಲಕ ಕಳುಹಿಸಿದೆ.
ಭಾರತ ಕ್ರಿಕೆಟ್ ತಂಡ 1983ರಲ್ಲಿ ಕಪಿಲ್ದೇವ್ ನೇತೃತ್ವದಲ್ಲಿ, 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಜಯಿಸಿತ್ತು. ಇದೀಗ ಕೊಹ್ಲಿ 2019 ರ ವಿಶ್ವಕಪ್ ಟೀಮ್ನಲ್ಲಿ ಕ್ಯಾಪ್ಟನ್ ಹೊಣೆ ಹೊತ್ತಿರುವುದಕ್ಕೆ ಹೆಮ್ಮೆಪಟ್ಟಿರುವ ಬಾಲ್ಯದ ಶಾಲೆ, ಕೊಹ್ಲಿ ಕ್ರಿಕೆಟ್ನ 'ಅಆಇಆಈ' ಕಲಿತ ಜಾಗದ ಮಣ್ಣನ್ನು ದೂರದ ಲಂಡನ್‌ಗೆ ಪಾರ್ಸೆಲ್ ಕಳುಹಿಸಿಕೊಟ್ಟು, ಶುಭ ಹಾರೈಸಿದೆ.