ಮುಂಬೈ: ಭಾರತಯ ಕಂಡ ಶ್ರೇಷ್ಠ ಆಲ್ರೌಂಡರ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಭಾರತ ಮಾಜಿ ಕ್ರಿಕೆಟಿಗರು ಯುವರಾಜ್ ಸಿಂಗ್ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹೇಳಿದ್ದಾರೆ.
ಯುವರಾಜ್ ಜೊತೆ ದಶಕಗಳ ಕಾಲ ಕ್ರಿಕೆಟ್ ಆಡಿರುವ ಸ್ಫೋಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ಯುವರಾಜ್ ಕುರಿತು ರೋಮಾಂಚನಕಾರಿ ಸಂದೇಶದ ಮೂಲಕ ಶುಭಕೋರಿದ್ದಾರೆ. " ಕ್ರಿಕೆಟ್ಗೆ ಆಟಗಾರರು ಬರಬಹುದು, ಹೋಗಬಹುದು ಆದರೆ ಯುವರಾಜ್ ಸಿಂಗ್ರಂತಹ ಆಟಗಾರರು ಸಿಗುವುದು ಮಾತ್ರ ತುಂಬಾ ಅಪರೂಪ, ತಮ್ಮ ಜೀವನದಲ್ಲಿ ಹಲವಾರು ನೋವುಗಳನ್ನು ಎದುರಿಸಿದ ಯುವಿ, ನೋವನ್ನೇ ಗೆದ್ದು ತೋರಿಸಿದವರು. ಕ್ರಿಕೆಟ್ಗೆ ರೀ ಎಂಟ್ರಿ ನೀಡಿ ಬೌಲರ್ಗಳನ್ನು ಸೋಲಿಸಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಯುವಿಯ ಹೋರಾಟ ಮತ್ತು ಆತ್ಮಸ್ಥೈರ್ಯದ ಗುಣ ನೂರಾರು ಜನರಿಗೆ ಸ್ಪೂರ್ತಿ" ಎಂದಿರುವ ವೀರೂ ಅವರ ಮುಂದಿನ ಜೀವನ ಉತ್ತಮವಾಗಿರಲಿ ಎಂದು ಶುಭಕೋರಿದ್ದಾರೆ.
ನಿಮ್ಮ ಕ್ರಿಕೆಟ್ ಜೀವನದ ತುಂಬಾ ಅದ್ಭುತವಾಗಿತ್ತ, ನೀವೊಬ್ಬ ನಿಜವಾದ ಚಾಂಪಿಯನ್ ಆಗಿದ್ದು, ತಂಡ ಯಾವಾಗಲು ನಿಮ್ಮ ಸೇವೆಯನ್ನು ಬಯಸುತ್ತಿತ್ತು. ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ನೀವು ಹಲವು ಏಳು ಬೀಳುಗಳನ್ನ ದಿಟ್ಟವಾಗಿ ಎದುರಿಸಿದ ರೀತಿ ಊಹೆಗೆ ಮೀರಿದ್ದಾಗಿದೆ. ನಿಮ್ಮ ಜೀವನದ 2ನೇ ಇನ್ನಿಂಗ್ಸ್ ಉತ್ತಮವಾಗಿರಲಿ ಎಂದು ಕ್ರಿಕೆಟ್ ದೇವರೆಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ ಅಭಿನಂದನೆ ಸಲ್ಲಿಸಿದ್ದಾರೆ.