ಕರ್ನಾಟಕ

karnataka

ETV Bharat / briefs

ಕೋವಿಡ್ ನಿಯಮ ಉಲ್ಲಂಘನೆ.. ಜಾತ್ರೆ ಮಾಡಲು ಹೋಗಿ ಜೈಲು ಸೇರಿದ ಗ್ರಾಮಸ್ಥರು..

ಜನ ಸೇರುವ ಕಾರಣ ಯಾವುದೇ ಆಚರಣೆಗಳು ಬೇಡ ಎಂದು ಪೊಲೀಸ್ ಇಲಾಖೆಯವರು ತಿಳಿಸಿದ್ದರು. ಆದರೂ ಸಹ ರಥೋತ್ಸವ ನಡೆಸಲು ಮುಂದಾದ ಹಿನ್ನೆಲೆ ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ 14 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ‌..

chamarajnagar
chamarajnagar

By

Published : Apr 27, 2021, 6:16 PM IST

ಚಾಮರಾಜನಗರ :ಕೊರೊನಾ ಭೀತಿಯಿಲ್ಲದೆ ಜಾತ್ರೆ ಮಾಡಲು ಮುಂದಾಗಿ 14 ಮಂದಿ ಜೈಲು ಸೇರಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೊಂಗಹಳ್ಳಿ ಗ್ರಾಮದ ಹೆಚ್.ಎಂ.ಮಹೇಶ್, ಮಂಜಪ್ಪ, ಶಿವಕುಮಾರ್, ಕುಬೇರವೀರತ್ತಪ್ಪ, ಶಿವಪ್ಪ, ಮಲ್ಲಪ್ಪ, ಲೋಕೇಶ್, ಸ್ವಾಮಿ, ಪ್ರಮೋದ್, ಹೆಚ್.ಆರ್.ರೇವಣ್ಣ, ಮಣಿಕಂಠ, ಶ್ರೀಧರ, ಬಸವಣ್ಣ ಬಂಧಿತರು. ಜೊತೆಗೆ 26 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕೋವಿಡ್ ಎರಡನೇ ಅಲೆ ಹಿನ್ನೆಲೆ ಸಂತೆ, ಜಾತ್ರೆ ಹೆಚ್ಚು ಜನ ಸೇರುವ ಇತರೆ ಯಾವುದೇ ಧಾರ್ಮಿಕ ಸಮಾರಂಭ ನಡೆಸದಂತೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯಿದೆ ಮತ್ತು ಸೆಕ್ಷನ್ 143, 353, 188 ಮತ್ತು 149 ಗಳನ್ನು ಜಾರಿ ಮಾಡಲಾಗಿದೆ. ಈ ರೀತಿ ಇದ್ದರೂ ಗ್ರಾಮದ ಕೋಡಿ ಬಸವೇಶ್ವರ ರಥೋತ್ಸವವನ್ನು ಸರಳವಾಗಿ ಆಚರಿಸಲು ಗ್ರಾಮಸ್ಥರು ಮುಂದಾಗಿದ್ದರು.

ಜನ ಸೇರುವ ಕಾರಣ ಯಾವುದೇ ಆಚರಣೆಗಳು ಬೇಡ ಎಂದು ಪೊಲೀಸ್ ಇಲಾಖೆಯವರು ತಿಳಿಸಿದ್ದರು. ಆದರೂ ಸಹ ರಥೋತ್ಸವ ನಡೆಸಲು ಮುಂದಾದ ಹಿನ್ನೆಲೆ ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ 14 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ‌. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details