ಬೆಳಗಾವಿ: ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಅಭಾವದ ಜೊತೆಗೆ ಇದೀಗ ಕೆಲವೆಡೆ ಕೊರೊನಾ ವ್ಯಾಕ್ಸಿನ್ ಅಭಾವವೂ ಸೃಷ್ಟಿಯಾಗಿದೆ. ಗೋಕಾಕ್ ನಗರದಲ್ಲಿ ವ್ಯಾಕ್ಸಿನ್ ಸಿಗದಿದ್ದಕ್ಕೆ ಸಾರ್ವಜನಿಕರು ತಾಲೂಕಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವ್ಯಾಕ್ಸಿನ್ ಹಾಕಿಸಿಕೊಳ್ಳಲು ಇಂದು ಬೆಳಗ್ಗೆ 8 ಗಂಟೆಗೆ ಜನರು ಆಸ್ಪತ್ರೆ ಆವರಣಕ್ಕೆ ಆಗಮಿಸಿದ್ದರು. ಬೆಳಗ್ಗೆ 10ರವರೆಗೆ ಕಾಯ್ದರೂ ಯಾವ ಸಿಬ್ಬಂದಿ ಕೂಡ ಆಸ್ಪತ್ರೆಗೆ ಬಂದಿರಲಿಲ್ಲ. ಬಳಿಕ ಆಗಮಿಸಿದ ಆಸ್ಪತ್ರೆ ಸಿಬ್ಬಂದಿ ವ್ಯಾಕ್ಸಿನ್ ಲಭ್ಯತೆ ಇಲ್ಲ.
ಇಂದು ವ್ಯಾಕ್ಸಿನ್ ಹಾಕುವುದಿಲ್ಲವೆಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ತಾಲೂಕಾಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲಸಿಕೆ ಅಲಭ್ಯತೆ ಬಗ್ಗೆ ನೋಟಿಸ್ ಬೋರ್ಡ್ ಮೇಲೆ ಇಲ್ಲಿನ ಸಿಬ್ಬಂದಿ ಮಾಹಿತಿ ನೀಡಬೇಕಿತ್ತು.
ಜನರು ಅದನ್ನು ನೋಡಿ ಮರಳುತ್ತಿದ್ದರು. ಇದೀಗ ಜನರ ಸಮಯವೂ ವ್ಯರ್ಥವಾಗಿದೆ. ಬೆಡ್ ಹಾಗೂ ವ್ಯಾಕ್ಸಿನ್ ಬಗ್ಗೆ ಮಾಹಿತಿ ನೀಡಿದ್ರೆ ಜನರಿಗೆ ಅನುಕೂಲವಾಗುತ್ತದೆ.
ಆದರೆ, ತಾಲೂಕಾಸ್ಪತ್ರೆ ಸಿಬ್ಬಂದಿ ಯಾವ ಮಾಹಿತಿಯನ್ನು ಜನರಿಗೆ ನೀಡುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಮಲ್ಲಿಕಾರ್ಜುನ ಕಾಂಬಳೆ ಆಕ್ರೋಶ ವ್ಯಕ್ತಪಡಿಸಿದರು.