ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದ್ದು ಬಿಎಸ್ಪಿ ಹಾಗೂ ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷ ಹೇಳ ಹೆಸರಿಲ್ಲದಂತಾಗಿದೆ.
ಎರಡನೇ ಅವಧಿಗೆ ಡಿ.ವಿ. ಸದಾನಂದಗೌಡ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಚಿವ ಕೃಷ್ಣಬೈರೇಗೌಡ ಪರಾಭವಗೊಂಡಿದ್ದಾರೆ. 31 ಅಭ್ಯರ್ಥಿಗಳಲ್ಲಿ ಇವರಿಬ್ಬರ ನಡುವೆ ನೇರ ಹಣಾಹಣಿ ನಡೆದಿತ್ತು. ಮೂರನೇ ಸ್ಥಾನವನ್ನು ನೋಟಾ ಕಬಳಿಸಿದೆ. ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಾಲ್ಕನೇ ಸ್ಥಾನ, ಬಿಎಸ್ಪಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.