ಕರ್ನಾಟಕ

karnataka

ETV Bharat / briefs

ಗ್ಯಾಸ್ಟ್ರೋ ಸಮಸ್ಯೆ: ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹಿಂದೆ ಸರಿದ ಸೈನಾ - ETV sportsnews kannada

ಸ್ವಿಸ್​ ಓಪನ್​ನಿಂದ್ ಹಿಂದೆ ಸರಿದ ನಂತರ ಇದೀಗ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತ ಬ್ಯಾಡ್ಮಿಂಟನ್​ ಸ್ಟಾರ್​ ಆಟಗಾರ್ತಿ ಸೈನಾ ನೆಹ್ವಾಲ್​ ಇಂಡಿಯನ್​ ಓಪನ್​ನಿಂದಲೂ ಹಿಂದೆ ಸರಿದಿದ್ದಾರೆ.

saina

By

Published : Mar 21, 2019, 10:13 AM IST

ಹೊಸದಿಲ್ಲಿ: ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದು ಇಂಡಿಯನ್​ ಓಪನ್​ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಸೂಪರ್‌ 500 ಇಂದ ಹಿಂದೆ ಸರಿದಿದ್ದಾರೆ.

ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ ನಡೆಯುವ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು ಈ ಟೂರ್ನಿಯಲ್ಲಿ ಸೈನಾ ಸೆಮಿಫೈನಲ್​ವರೆಗೂ ತಲುಪಿದ್ದರು. ನಂತರ ಸ್ವಿಸ್‌ ಓಪನ್‌ನಿಂದಲೂ ಹಿಂದೆ ಸರಿದಿದ್ದರು. ಇದೀಗ ಸೋಮವಾರವಷ್ಟೇ 29ನೇ ವಸಂತಕ್ಕೆ ಕಾಲಿಟ್ಟ ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ, ಜಠರದಲ್ಲಿನ ತೀವ್ರ ಸ್ವರೂಪದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಸೈನಾ ನೆಹ್ವಾಲ್​

ಬುಧವಾರ ಸ್ವತಃ ಸೈನಾ ಬ್ಯಾಡ್ಮಿಂಟನ್​ ಅಸೋಸಿಯೇಷನ್​ಗೆ ತಾವೂ ಇಂಡಿಯನ್​ ಓಪನ್​ನಿಂದ ಹಿಂದೆ ಸರಿಯುತ್ತಿರುವದರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಟೂರ್ನಿ 350000 ಅಮೆರಿಕನ್​ ಡಾಲರ್​ (2.4 ಕೋಟಿ ರೂ.) ಬಹುಮಾನ ಮೊತ್ತ ಹೊಂದಿದೆ.

ಈ ಕುರಿಯು ಮಾಧ್ಯಮದೊಂದಿಗೆ ಮಾತನಾಡಿರುವ ಅಧಿಕಾರಿಯೊಬ್ಬರು ಬಿಐಎನ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ ಬಳಿಕ ಸೈನಾ ಆರೋಗ್ಯ ಸ್ಥಿತಿ ಸರಿಯಿಲ್ಲ, ಹೊಟ್ಟೆ ನೋವಿನ ಕಾರಣ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ಕಳುಹಿಸಿದ್ದಾರೆ ಎಂದಿದ್ದಾರೆ.

ಸೈನಾ ನೆಹ್ವಾಲ್​ ಹಿಂದೆ ಸರಿದ ಕಾರಣ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿರುವ ಪಿ.ವಿ ಸಿಂಧೂ ಭಾರತದ ಪ್ರಶಸ್ತಿ ಗೆಲುವಿನ ಏಕೈಕ ಭರವಸೆಯಾಗುಳಿದಿದ್ದಾರೆ.

ABOUT THE AUTHOR

...view details