ಮೀರತ್: ತೃತೀಯ ಲಿಂಗಿಗಳ ಮೇಲೆ ಪೊಲೀಸರು ಹಿಗ್ಗಾಮುಗ್ಗಾ ಲಾಠಿಚಾರ್ಜ್ ಮಾಡಿರುವ ಘಟನೆ ಉತ್ತರಪ್ರದೇಶದ ಮೀರತ್ನಲ್ಲಿ ನಡೆದಿದೆ.
ತೃತೀಯ ಲಿಂಗಿಗಳ ಮೇಲೆ ಪೊಲೀಸರ ಲಾಠಿಚಾರ್ಜ್... ಹಿಗ್ಗಾಮುಗ್ಗಾ ಥಳಿಸಿದ ಖಾಕಿ ಪಡೆ!
ಪೊಲೀಸ್ ಠಾಣೆಗೆ ಆಗಮಿಸಿದ್ದ ವೇಳೆ ತೃತೀಯ ಲಿಂಗಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿರುವ ಘಟನೆ ನಡೆದಿದ್ದು, ಪೊಲೀಸರ ಆಕ್ರೋಶಕ್ಕೆ ಮಂಗಳಮುಖಿಯರು ದಿಕ್ಕು ಕಾಣದೇ ಓಡಾಡಿದ್ದಾರೆ.
ಲಾಲ್ಕುರ್ತಿ ಪೊಲೀಸ್ ಕಚೇರಿಗೆ ಆಗಮಿಸಿರುವ ತೃತೀಯ ಲಿಂಗಿಗಳು ಪೊಲೀಸರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಕಾರಣ ಅವರ ಮೇಲೆ ಲಾಠಿಚಾರ್ಜ್ ನಡೆಸಲಾಗಿದೆ ಎಂದು ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಠಾಣೆಗೆ ಬಂದು ಏಕಾಏಕಿಯಾಗಿ ಅಸಭ್ಯವಾಗಿ ವರ್ತನೆ ಮಾಡಲು ಆರಂಭಿಸಿದ ಕಾರಣ, ಅವರನ್ನ ನಿಯಂತ್ರಣಕ್ಕೆ ತರಲು ಲಾಠಿಚಾರ್ಜ್ ನಡೆಸಲಾಗಿದ್ದು, ಒಂದು ವೇಳೆ ಅವಶ್ಯಕತೆಗಿಂತಲೂ ಹೆಚ್ಚು ಪೊಲೀಸ್ ಬಳಕೆಯಾಗಿದ್ದರೇ ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ. ಇನ್ನು ಪೊಲೀಸರು ಇವರ ಮೇಲೆ ಲಾಠಿ ಚಾರ್ಜ್ ಮಾಡಲು ಶುರು ಮಾಡುತ್ತಿದ್ದಂತೆ ಪೊಲೀಸ್ ಕಚೇರಿ ತುಂಬ ಓಡಾಡಿದ್ದಾರೆ.