ಕರ್ನಾಟಕ

karnataka

ETV Bharat / briefs

ವಿಶ್ವಕಪ್​ನಲ್ಲಿ ಹೆಚ್ಚು ಬಾರಿ ಗರಿಷ್ಠ ಸ್ಕೋರರ್​​ಗಳು ಯಾರು..?  ಇದರಲ್ಲೂ ಭಾರತೀಯರದ್ದೇ ಮೇಲುಗೈ!

ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ 11 ವಿಶ್ವಕಪ್​  ನಡೆದಿದ್ದು 6 ವಿಶ್ವಕಪ್​ನಲ್ಲಿ ಭಾಗವಹಿಸಿರುವ ಸಚಿನ್​ ತೆಂಡೂಲ್ಕರ್​ ಎರಡು ಬಾರಿ ಹಾಗೂ ಕನ್ನಡಿಗ ದ್ರಾವಿಡ್ ಒಮ್ಮೆ ಟೂರ್ನಿಯ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ.

icc

By

Published : May 28, 2019, 5:52 PM IST

ಲಂಡನ್​:ಏಕದಿನ ಕ್ರಿಕೆಟ್​ನಲ್ಲಿರುವ ಬಹುತೇಕ ಬ್ಯಾಟಿಂಗ್​ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಸಚಿನ್​ ವಿಶ್ವಕಪ್​ನಲ್ಲೂ ಕೆಲವು ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ.

ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ 11 ವಿಶ್ವಕಪ್​ ನಡೆದಿದ್ದು, 6 ವಿಶ್ವಕಪ್​ನಲ್ಲಿ ಬಾಗವಹಿಸಿರುವ ಸಚಿನ್​ ತೆಂಡೂಲ್ಕರ್​ ಎರಡು ಬಾರಿ ಟೂರ್ನಿಯ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ 2003 ರಲ್ಲಿ 673 ರನ್​ಗಳಿಸುವ ಮೂಲಕ ವಿಶ್ವಕಪ್​ ಇತಿಹಾಸದಲ್ಲಿ ಅತಿ ಹೆಚ್ಚು ರನ್​ಗಳಿಸಿದ ಆಟಗಾರ ಎಂಬ ದಾಖಲೆ ಇಂದಿಗೂ ಅವರ ಹೆಸರಿನಲ್ಲಿಯೇ ಇದೆ. 1996 ವಿಶ್ವಕಪ್​ನಲ್ಲಿ ಸಚಿನ್​ 523 ರನ್​ಗಳಿಸಿ ಗರಿಷ್ಠ ರನ್​ ಸರದಾರರಾಗಿದ್ದರು.

ಸಚಿನ್​ ದ್ರಾವಿಡ್​

ವಿಶೇಷವೆಂದರೆ 1996ರ ವಿಶ್ವಕಪ್​ನಿಂದ 2003ರ ವಿಶ್ವಕಪ್​ವರೆಗೆ ಭಾರತೀಯರದ್ದೇ ಮೇಲುಗೈ ಇದ್ದು, ಸಚಿನ್​ ಎರಡು ಬಾರಿ ಹಾಗೂ ಕನ್ನಡಿಗ ದ್ರಾವಿಡ್​ ಒಮ್ಮೆ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ.

ವಿಶ್ವಕಪ್​ಗಳಲ್ಲಿ ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್​ಗಳು
1975 ಗ್ಲೇನ್​ ಟರ್ನರ್(​NZ) 333ರನ್​
1979 ಗಾರ್ಡನ್​ ಗ್ರೀನಿಡ್ಜ್(WI) 253ರನ್​
1983 ಡೇವಿಡ್​ ಗೋವರ್(​Eng) 384 ರನ್​
1987 ಗ್ರಹಾಂ ಗೂಚ್​ ​(ENG) 471ರನ್​
1992 ಮಾರ್ಟಿನ್​ ಕ್ರೋವ್(NZ)​ 456 ರನ್​
1996 ಸಚಿನ್​ ತೆಂಡೂಲ್ಕರ್(IND)​ 523 ರನ್​
1999 ರಾಹುಲ್ ​ದ್ರಾವಿಡ್​(IND) ​ 461 ರನ್​
2003 ಸಚಿನ್​ ತೆಂಡೂಲ್ಕರ್(IND)​ 673ರನ್​
2007 ಮ್ಯಾಥ್ಯೂ ಹೇಡನ್​(AUS) 659ರನ್​
2011 ತಿಲಕರತ್ನೆ ದಿಲ್ಶನ್(SL) 500 ರನ್​
2015 ಮಾರ್ಟಿನ್​ ಗಪ್ಟಿಲ್(NZ)​ 547 ರನ್​

ABOUT THE AUTHOR

...view details