ಶಿವಮೊಗ್ಗ: ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕಿನ ಮಣ್ಣತ್ತಿ ಗ್ರಾಮದಲ್ಲಿ ನಡೆದಿದೆ.
ಟಿಪ್ಪರ್ - ಬೈಕ್ ಮುಖಾಮುಖಿ: ಸವಾರ ಸ್ಥಳದಲ್ಲೇ ಸಾವು - ಶಿವಮೊಗ್ಗ ಇತ್ತೀಚಿನ ಸುದ್ದಿ
ಸೊರಬ ತಾಲೂಕಿನ ಮಣ್ಣತ್ತಿ ಗ್ರಾಮದಲ್ಲಿ ಬೈಕ್ಗೆ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿದ್ದು, ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ
accident
ಪ್ರತಾಪ್(22) ಮೃತ ಬೈಕ್ ಸವಾರ. ಬೈಕ್ ಹಿಂಬದಿ ಸವಾರ ಗುರು ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಗುರುವನ್ನು ಸೊರಬ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಸೊರಬ ಪಿಎಸ್ಐ ಪ್ರಶಾಂತ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.