ಕರ್ನಾಟಕ

karnataka

ETV Bharat / briefs

ಮೋದಿಗೆ 'ಡಿವೈಡರ್​ ಇನ್​ ಚೀಫ್'​ ಪಟ್ಟ ಕೊಟ್ಟ 'ಟೈಮ್​ ಮ್ಯಾಗಜಿನ್'​ನಿಂದಲೇ ಗುಣಗಾನ!

ಲೋಕಸಭಾ ಚುನಾವಣೆ ಫಲಿತಾಂಶ ಬರುವುದಕ್ಕೂ ಮುನ್ನ ಮೋದಿ ವಿರೋಧಿಸಿ ಅಮೆರಿಕದ ಜನಪ್ರಿಯ 'ಟೈಮ್​ ಮ್ಯಾಗಜಿನ್'​ ವಿವಾದಿತ ವರದಿ ಪ್ರಕಟಿಸಿತ್ತು. ಇದೀಗ ಉಲ್ಟಾ ಹೊಡೆದು ಈ ಪತ್ರಿಕೆ ನಮೋ ಸಾಧನೆ ಕೊಂಡಾಡಿದೆ.

ನರೇಂದ್ರ ಮೋದಿ

By

Published : May 29, 2019, 12:32 PM IST

ನವದೆಹಲಿ:ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕುರಿತು ಅಮೆರಿಕದ ಟೈಮ್​ ಮ್ಯಾಗಜಿನ್​ ವಿವಾದಿತ ವರದಿ ಪ್ರಕಟಿಸಿ, ಮೋದಿ ಓರ್ವ 'ಇಂಡಿಯಾಸ್​ ಡಿವೈಡರ್​ ಇನ್ ಚೀಫ್'​( ಭಾರತದ ಮುಖ್ಯ ವಿಭಜಕ) ಎಂಬ ಶೀರ್ಷಿಕೆ ನೀಡಿತ್ತು. ಇದೀಗ ಉಲ್ಟಾ ಹೊಡೆದಿರುವ ಇದೇ ಮ್ಯಾಗಜಿನ್,​ ನಮೋ ಗುಣಗಾಣ ಮಾಡಿದೆ.

ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲು ಮಾಡಿದ ಬಳಿಕ 'ಭಾರತವನ್ನ ಒಗ್ಗೂಡಿಸುವ ವಿಶ್ವದ ಪ್ರಬಲ ನಾಯಕ' ಎಂದು ಮ್ಯಾಗಜಿನ್​ ಹೊಗಳಿದೆ. ತನ್ನ ಮ್ಯಾಗಜಿನ್​​ನಲ್ಲಿ ಮೋದಿ ಕುರಿತು ಲೇಖನವೊಂದನ್ನ ಪ್ರಕಟಿಸಿದ್ದು, ಅದರಲ್ಲಿ ಮೋದಿ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದು, ಈ ಹಿಂದಿನ ಪ್ರಧಾನಿಗಳಾರೂ ಈ ಕೆಲಸ ಮಾಡಿಲ್ಲ ಎಂಬ ಶೀರ್ಷಿಕೆ ನೀಡಿದೆ.

ಈ ಹಿಂದೆ ಇದೇ ಟೈಮ್​ ಮ್ಯಾಗಜಿನ್​ ತನ್ನ 20ರ ಸಂಚಿಕೆಯಲ್ಲಿ 'ಇಂಡಿಯಾಸ್​ ಡಿವೈಡರ್​ ಇನ್​ ಚೀಪ್'​ ಎಂದು ತಲೆ ಬರಹ ನೀಡಿ ವಿಸ್ತೃತ ವಿಶೇಷ ವರದಿ ಪ್ರಕಟಿಸಿತ್ತು. ಅದರಲ್ಲಿ ಮೋದಿ ನೇತೃತ್ವದ ಬಿಜೆಪಿ, ಉದ್ದೇಶಪೂರ್ವಕವಾಗಿ ದೇಶದಲ್ಲಿ ಹಿಂದೂ-ಮುಸ್ಲೀಮರನ್ನು ವಿಭಜಿಸುತ್ತಿದೆ ಎಂದು ಆಪಾದಿಸಿತ್ತು.

ABOUT THE AUTHOR

...view details