ಕರ್ನಾಟಕ

karnataka

ETV Bharat / briefs

ಟಿಕ್​ಟಾಕ್​ ಆ್ಯಪ್​​​ ತೆಗೆದುಹಾಕಿ... ಗೂಗಲ್​​, ಆ್ಯಪಲ್​ ಸಂಸ್ಥೆಗೆ ಕೇಂದ್ರದ ಸೂಚನೆ - ಗೂಗಲ್

ವ್ಯಕ್ತಿಯ ಖಾಸಗಿತನದ ಹರಣ ಕಾರಣವನ್ನಾಗಿರಿಸಿ ಟಿಕ್​ಟಾಕ್​ ಆ್ಯಪ್ ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್​ ಆ್ಯಪ್ ನಿಷೇಧಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು.

ಟಿಕ್​ಟಾಕ್​ ಆ್ಯಪ್​​​

By

Published : Apr 16, 2019, 5:23 PM IST

ನವದೆಹಲಿ:ಜನಪ್ರಿಯ ವಿಡಿಯೋ ಆ್ಯಪ್ ಟಿಕ್​ಟಾಕ್​​​ ನಿಷೇಧದ ಭೀತಿ ಎದುರಿಸುತ್ತಿರುವ ಮಧ್ಯೆಯೇ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಗೂಗಲ್ ಹಾಗೂ ಆ್ಯಪಲ್​ ಸಂಸ್ಥೆಗಳಿಗೆ ಚೀನೀ ಮೂಲದ ಆ್ಯಪ್​ ತೆಗೆಯುವಂತೆ ಆದೇಶ ನೀಡಿದೆ.

ವ್ಯಕ್ತಿಯ ಖಾಸಗಿತನದ ಹರಣ ಕಾರಣವನ್ನಾಗಿರಿಸಿ ಟಿಕ್​ಟಾಕ್​ ಆ್ಯಪ್ ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್​, ಆ್ಯಪ್ ನಿಷೇಧಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು. ನಂತರ ಈ ವಿಚಾರ ಸುಪ್ರೀಂ ಮೆಟ್ಟಿಲೇರಿತ್ತು.

ಸದ್ಯ ಸುಪ್ರೀಂ ಅಂಗಳದಲ್ಲಿದ್ದು ಏಪ್ರಿಲ್​​ 22ರಂದು ವಿಚಾರಣೆಗೆ ಬರಲಿದೆ. ಸುಪ್ರೀಂ ತೀರ್ಪಿಗೂ ಮುನ್ನವೇ ಎಚ್ಚೆತ್ತಿರುವ ಕೇಂದ್ರ, ಆ್ಯಪ್​​ ತೆಗೆದು ಹಾಕುವಂತೆ ಗೂಗಲ್​ ಹಾಗೂ ಆ್ಯಪಲ್​ ಸಂಸ್ಥೆಗಳಿಗೆ ಆದೇಶಿಸಿದೆ.

ABOUT THE AUTHOR

...view details