ಪೆರಂಬಲೂರು(ತಮಿಳುನಾಡು):ಎಲ್ಲ ವಯೋಮಾನದವರನ್ನೂ ತನ್ನತ್ತ ಸೂಜಿಗಲ್ಲಿನಂತೆ ಸೆಳೆದುಕೊಂಡಿರುವ ಟಿಕ್ಟಾಕ್ ವಿಡಿಯೋ ಆ್ಯಪ್ ಯಾವ ರೀತಿ ಪ್ರಾಣಕ್ಕೆ ಸಂಚಕಾರ ತರುತ್ತದೆ ಎನ್ನುವುದಕ್ಕೆ ತಮಿಳುನಾಡಿನ ಈ ಘಟನೆಯೇ ಸಾಕ್ಷಿ.
ತಮಿಳುನಾಡಿನ ಪೆರಂಬಲೂರಿನ ನಿವಾಸಿ ಅನಿತಾ ಎನ್ನುವ ಮಹಿಳೆ ಟಿಕ್ -ಟಾಕ್ಗೆ ಅಡಿಕ್ಟ್ ಆಗಿದ್ದಳು. ಗಂಡ ಸಿಂಗಾಪುರದಲ್ಲಿ ಉದ್ಯೋಗದಲ್ಲಿದ್ದು, ಅನಿತಾ ತನ್ನ ಮಕ್ಕಳೊಂದಿಗೆ ಪೆರಂಬಲೂರಿನಲ್ಲಿ ವಾಸವಾಗಿದ್ದಳು.
ಆತ್ಮಹತ್ಯೆಯ ಟಿಕ್ಟಾಕ್ ವಿಡಿಯೋ ನಿತ್ಯ ಹಲವಾರು ಟಿಕ್ಟಾಕ್ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದಳು ಎನ್ನಲಾಗಿದೆ. ದಿನದಿಂದ ದಿನಕ್ಕೆ ವಿಡಿಯೋಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆಕೆಯ ಮಗುವಿಗೆ ಕಾಲಿಗೆ ಗಾಯವಾಗಿದ್ದರೂ ತನ್ನ ಟಿಕ್ -ಟಾಕ್ ಮೋಹದಿಂದ ಸೂಕ್ತ ಚಿಕಿತ್ಸೆಯೂ ನೀಡಿರಲಿಲ್ಲ. ಈ ಕಾರಣಕ್ಕೆ ಪತಿ ಪಳನಿವೇಲ್ ಆಕೆಯನ್ನು ಬೈದಿದ್ದ.
ಪತಿಯ ಬೈಗುಳದಿಂದ ಮನನೊಂದ ಅನಿತಾ ಟಿಕ್ಟಾಕ್ ಮೂಲಕ ತನ್ನ ಆತ್ಮಹತ್ಯೆ ರೆಕಾರ್ಡ್ ಮಾಡಿ ಜೀವನ ಕೊನೆಗೊಳಿಸಿದ್ದಾಳೆ. ಕ್ರಿಮಿನಾಶಕ ಸೇವಿಸಿ ಅನಿತಾ ಸಾವಿಗೆ ಶರಣಾಗಿದ್ದಾಳೆ.