ಕರ್ನಾಟಕ

karnataka

ETV Bharat / briefs

ವಿಶ್ವಕಪ್​ ಆಯ್ಕೆಯ ನಿರೀಕ್ಷೆಯಲ್ಲಿದ್ದ ಪ್ರಮುಖ 5 ಆಟಗಾರರಿಗೆ ನಿರಾಶೆ - yuvi

ಕೊನೆಯ ವಿಶ್ವಕಪ್​ ಆಡುವ ಖುಷಿಯಲ್ಲಿದ್ದ 4 ಆಟಗಾರರ ಜೊತೆ ಈ ವಿಶ್ವಕಪ್​ಗೆ ಡೆಬ್ಯೂಟ್​ ಮಾಡಬೇಕೆಂದುಕೊಂಡಿದ್ದ 5 ಆಟಗಾರರಿಗೆ ಆಯ್ಕೆ ಸಮಿತಿ ನಿರಾಶೆ ಮೂಡಿಸಿದೆ.

yuvi

By

Published : Apr 15, 2019, 10:25 PM IST

ಮುಂಬೈ: ಮೂರು ವಿಶ್ವಕಪ್​ನಲ್ಲಿ ಆಡಿರುವ ಯುವರಾಜ್​ ಸಿಂಗ್​ ಸೇರಿದಂತೆ ಪ್ರಮುಖ 5 ಆಟಗಾರರು 2015 ರ ವಿಶ್ವಕಪ್​ನಲ್ಲಿ ಆಡುವ ಕನಸು ನುಚ್ಚುನೂರಾಗಿದೆ.

2007 ಟಿ20 ಹಾಗೂ 2011ರ ಏಕದಿನ ವಿಶ್ವಕಪ್​ಅನ್ನು ಭಾರತ ತಂಡಕ್ಕೆ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದ ಯುವರಾಜ್ ​ಸಿಂಗ್​ ಈ ಬಾರಿ ತಮ್ಮ ಕೊನೆಯ ವಿಶ್ವಕಪ್​ನಲ್ಲಿ ಆಡುವ ಕನಸು ಹೊತ್ತುಕೊಂಡಿದ್ದ 5 ಆಟಗಾರರಿಗೆ ಬಿಸಿಸಿಐ ನಿರಾಸೆ ಮೂಡಿಸಿದೆ.

1.ಯುವರಾಜ್​ ಸಿಂಗ್​

2003ರಿಂದ 2011 ರವರೆಗೆ 3 ವಿಶ್ವಕಪ್​ನಲ್ಲಿ ಆಡಿದ ಅನುಭವವುಳ್ಳ ಯುವರಾಜ್​ ಸಿಂಗ್​ ಈ ಬಾರಿ ವಿಶ್ವಕಪ್​ಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಇದೀಗ ಅವರ ನಿರೀಕ್ಷೆ ಹುಸಿಯಾಗಿದ್ದು, ಅವರ ವೃತ್ತಿಜೀವನ ಮುಕ್ತಾಯವಾದಂತಾಗಿದೆ. ಯುವರಾಜ್ 304 ಪಂದ್ಯಗಳಲ್ಲಿ​ 8701 ರನ್​ಗಳಿಸಿದ್ದಾರೆ.

2.ಅಜಿಂಕ್ಯಾ ರಹಾನೆ

ಭಾರತದ ಟೆಸ್ಟ್​ ತಂಡದ ಖಾಯಂ ಆಟಗಾರನಾಗಿರುವ ಅಜಿಂಕ್ಯ ರಹಾನೆಯನ್ನು ಬಿಸಿಸಿಐ ವಿಶ್ವಕಪ್​ನಿಂದ ಕೈಬಿಟ್ಟಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ. ರಹಾನೆ ಇಂಗ್ಲೆಂಡ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ ಆಯ್ಕೆ ಸಮತಿ ರಹಾನೆ ಬದಲು ವಿಜಯ್​ ಶಂಕರ್​,ಕೇದಾರ್​ ಜಾಧವ್​ಗೆ 4 ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿದೆ. ರಹಾನೆ 90 ಏಕದಿನ ಪಂದ್ಯಗಳಲ್ಲಿ 2962 ರನ್​ಗಳಿಸಿದ್ದಾರೆ.

3.ಆರ್​.ಅಶ್ವಿನ್​

ಕಳೆದೆರಡು ವರ್ಷಗಳಿಂದ ಏಕದಿನ ಕ್ರಿಕೆಟ್​ನಿಂದ ದೂರವಿರುವ ಅಶ್ವಿನ್​ 111 ಏಕದಿನ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಪ್ರತಿನಿದಿಸಿದ್ದು 150 ವಿಕೆಟ್​ ಪಡೆದಿದ್ದಾರೆ. ಆಸ್ವಿನ್​ ಈ ಬಾರಿ ವಿಶ್ವಕಪ್​ ಮೇಲೆ ಕಣ್ಣಿಟ್ಟಿದ್ದರು,ಆದರೆ ಯುವ ರಿಸ್ಟ್​ ಸ್ಪಿನ್​ ಬೌಲರ್​ಗಳಾದ ಕುಲದೀಪ್​ ಹಾಗೂ ಚಹಾಲ್​ ಅಶ್ವಿನ್​ರನ್ನ ಹಿಂದಿಕ್ಕಿ ವಿಶ್ವಕಪ್​ ಟಿಕೆಟ್​ ಗಿಟ್ಟಿಸಿಕೊಂಡಿದ್ದಾರೆ.

4.ಸುರೇಶ್​ ರೈನಾ

2011 ಹಾಗೂ 2015 ರ ವಿಶ್ವಕಪ್​ನಲ್ಲಿ ಗೆಮ್​ ಫಿನಿಸರ್​ ಆಗಿದ್ದ ರೈನಾ ನಂತರ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಆದರೂ ಟಿ20 ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ರೈನಾ 19ರ ವಿಶ್ವಕಪ್​ನಲ್ಲಿ 4 ನೇ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಬಿಸಿಸಿಐ ರೈನಾರ ಕನಸಿಗೆ ತಣ್ಣೀರೆರಚಿದೆ.

5.ಶ್ರೇಯಸ್​ ಅಯ್ಯರ್​

24 ವರ್ಷದ ಶ್ರೇಯಸ್​ ಅಯ್ಯರ್​ ಆಡಿರುವ 5 ಇನಿಂಗ್ಸ್​ನಿಂದ 2 ಅರ್ಧಶತಕದ ಸಹಿತ 210 ರನ್​ ಗಳಿಸಿದ್ದು, 4ನೇ ಸ್ಥಾನಕ್ಕೆ ಸೂಕ್ತ ಪ್ರತಿಭೆ ಎಂದು ಬಿಂಬಿಸಲಾಗಿತ್ತು. ಬಿಸಿಸಿ ಈ ಯುವ ಆಟಗಾರ ಚೊಚ್ಚಲ ವಿಶ್ವಕಪ್​ ಆಸೆಯನ್ನು ಮುಂದೂಡಿಸಿದೆ. ಐಪಿಎಲ್​, ವಿಜಯ್​ ಅಜಾರೆ ಹಾಗೂ ಸಯ್ಯದ್​ ಮುಸ್ತಾಕ್​ ಅಲಿ ಟೂರ್ನಿಯಲ್ಲಿ ಅಯ್ಯರ್​ ಅದ್ಭುತ ಪ್ರದರ್ಶನ ನೀಡಿದ್ದರು.

ABOUT THE AUTHOR

...view details