ಕರ್ನಾಟಕ

karnataka

ETV Bharat / briefs

ಇದು ಭೂಲೋಕದ ಸ್ವರ್ಗ.. ವಿಶ್ವದ ಅತೀ ಎತ್ತರದ ಮತ ಕೇಂದ್ರ ಇಲ್ಲುಂಟು!

ತಾಷ್‌ಲಿಂಗ್‌.. ಹಿಮಾಚಲಪ್ರದೇಶದ ಕಿನ್ನೌರ್‌ ಜಿಲ್ಲೆಯ ಪುಟ್ಟ ಹಳ್ಳಿ. ಸಮುದ್ರಮಟ್ಟದಿಂದ 15,256 ಅಡಿ ಎತ್ತರ ಪ್ರದೇಶದಲ್ಲಿರುವ ಇದೇ ಹಳ್ಳಿಯಲ್ಲೂ ಈಗ ಮತದಾನ ನಡೆಯಲಿದೆ.

ಭೂಲೋಕದ ಸ್ವರ್ಗ

By

Published : Apr 9, 2019, 9:15 PM IST

ತಾಷ್‌ಲಿಂಗ್‌,(ಹಿಮಾಚಲಪ್ರದೇಶ): ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಅದು ಪ್ರತಿ ಪ್ರಜೆಗೂ ಗರ್ವ ಹುಟ್ಟಿಸುತ್ತೆ. ಆದರೆ, ವಿಶ್ವದ ಅತೀ ದೊಡ್ಡ ಮತದಾನ ಕೇಂದ್ರ ಎಲ್ಲಿದೆ ಅಂತಾ ಗೊತ್ತಾ..? ಅದೂ ಕೂಡ ಭಾರತದಲ್ಲಿದೆ ಅನ್ನೋದೇ ಹೆಮ್ಮೆ.

ಭೂಲೋಕದ ಸ್ವರ್ಗ

ತಾಷ್‌ಲಿಂಗ್‌.. ಹಿಮಾಚಲಪ್ರದೇಶದ ಕಿನ್ನೌರ್‌ ಜಿಲ್ಲೆಯ ಪುಟ್ಟ ಹಳ್ಳಿ. ಸಮುದ್ರಮಟ್ಟದಿಂದ 15,256 ಅಡಿ ಎತ್ತರ ಪ್ರದೇಶದಲ್ಲಿರುವ ಇದೇ ಹಳ್ಳಿಯಲ್ಲೂ ಈಗ ಮತದಾನ ನಡೆಯಲಿದೆ. ಜಗತ್ತಿನ ಅತೀ ಎತ್ತರದ ಮತ ಕೇಂದ್ರವನ್ನ ತಾಷ್‌ಲಿಂಗ್‌ ಹೊಂದಿದೆ. ಮನುಷ್ಯನಿಗೆ ಚೈತನ್ಯ, ಹುರುಪ ತರುವ ಗಿರಿ-ಶಿಖರಗಳು ಇಲ್ಲಿವೆ. ಈ ಹಳ್ಳಿ ಭಾರತ-ಚೀನಾ ಗಡಿರೇಖೆಯಿಂದ ಬರೀ 30 ಕಿ.ಮೀ ಅಂತರದಲ್ಲಿದೆ.

ವಿಶ್ವದ ಅತೀ ಎತ್ತರದ ಮತ ಕೇಂದ್ರ
ವಿಶ್ವದ ಅತೀ ಎತ್ತರದ ಮತ ಕೇಂದ್ರ

ಮೊಬೈಲ್‌ ಸಿಗ್ನಲ್ಸ್‌ ಸಿಗಲ್ಲ, ಸ್ಯಾಟ್‌ಲೈಟ್‌ ಫೋನ್‌ ಆಶ್ರಯ :
ಈ ಊರಲ್ಲಿನ ಬೂತ್‌ನಲ್ಲಿ ಮತದಾರ ಮಾಡ್ತಿರುವವರ ಸಂಖ್ಯೆ ಬರೀ 48. ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬರುವ ಈ ಗ್ರಾಮದಲ್ಲಿ ಮೇ 19ರಂದು ಮತದಾನ ನಡೆಯಲಿದೆ. ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ ವರ್ಷದ ಬಹುತೇಕ ದಿನಗಳಲ್ಲಿ ಕ್ಲೋಸಾಗಿರುತ್ತೆ. ಯಾಕಂದ್ರೇ, ಅತೀ ಹೆಚ್ಚು ಹಿಮ ಬೀಳುವ ಪ್ರದೇಶ ಇದಾಗಿರುವುದರಿಂದಾಗಿ, ರಸ್ತೆ ಮೇಲೆ ಸಂಚಾರ ನಡೆಸುವುದು ಬಲು ಕಷ್ಟ. ಮೊಬೈಲ್ ಸಿಗ್ನಲ್ಸ್‌ ಸಹ ಸಿಗಲ್ಲ. ಚುನಾವಣಾ ಕರ್ತವ್ಯಕ್ಕೆ ಬರುವ ಸಿಬ್ಬಂದಿ ಇಲ್ಲಿ ಸ್ಯಾಟಲೈಟ್‌ ಫೋನ್‌ಗಳನ್ನ ಬಳಕೆ ಮಾಡುತ್ತಾರೆ. ಈ ಮೊದಲು ಹಿಕ್ಕಿಂ ವಿಶ್ವದ ಅತೀ ಎತ್ತರದ ಮತದಾನ ಕೇಂದ್ರ ಅನ್ನೋ ಖ್ಯಾತಿ ಹೊಂದಿತ್ತು. ತಾಷ್‌ಲಿಂಗ್‌ನಿಂದ 160 ಕಿ.ಮೀ ದೂರದಲ್ಲಿ ಹಿಕ್ಕಿಂ ಹಳ್ಳಿಯಿದೆ.

ವಿಶ್ವದ ಅತೀ ಎತ್ತರದ ಮತ ಕೇಂದ್ರ
ವಿಶ್ವದ ಅತೀ ಎತ್ತರದ ಮತ ಕೇಂದ್ರ

ABOUT THE AUTHOR

...view details