ನೆಲಮಂಗಲ: ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದಲ್ಲಿ ನೆಲಮಂಗಲದ 7 ಜೆಡಿಎಸ್ ಮುಖಂಡರು ಮೃತಪಟ್ಟಿದ್ದು, ಮೃತದೇಹ ಇಂದು ಸಂಜೆಗೆ ಶ್ರೀಲಂಕಾದಿಂದ ಭಾರತಕ್ಕೆ ಬರುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿ ಗೆಲುವಿಗಾಗಿ ಸಾಕಷ್ಟು ದಣಿದಿದ್ದ ನೆಲಮಂಗಲ ಜೆಡಿಎಸ್ ಮುಖಂಡರು. ಚುನಾವಣೆಯ ನಂತರ ವಿಶ್ರಾಂತಿ ಬಯಸಿ ನೆರೆ ರಾಷ್ಟ್ರ ಶ್ರೀಲಂಕಾಕ್ಕೆ ಪ್ರವಾಸ ತೆರಳಿದ್ದರು. ಈ ವೇಳೆ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಪ್ರವಾಸಕ್ಕೆ ತೆರಳಿದ ಶಿವಕುಮಾರ್, ಲಕ್ಷ್ಮೀನಾರಾಯಣ್ ಸೇರಿ 7 ಜನರು ಮೃತಪಟ್ಟಿದ್ದಾರೆ. ಸಾವಿನ ಸುದ್ದಿ ಕೇಳಿ ಇವತ್ತಿಗೆ ಮೂರನೇ ದಿನವಾಗಿದ್ದದರೂ ಮೃತದೇಹಗಳು ಭಾರತಕ್ಕೆ ಬಂದಿಲ್ಲ. ಮೃತರ ಕುಟುಂಬ ಮತ್ತು ಪಕ್ಷದ ಕಾರ್ಯಕರ್ತರರು ಮೃತರ ಅಂತಿಮ ದರ್ಶನಕ್ಕಾಗಿ ಕಾಯುತ್ತಿದ್ದಾರೆ.
ಲಂಕಾ ದಹನ... ಸ್ಫೋಟದಲ್ಲಿ ಮೃತಪಟ್ಟವರ ಮನೆಯಲ್ಲಿ ನೀರವ ಮೌನ - silence in the house
ಚುನಾವಣೆಯ ನಂತರ ವಿಶ್ರಾಂತಿ ಬಯಸಿ ನೆರೆ ರಾಷ್ಟ್ರ ಪ್ರವಾಸಕ್ಕೆಂದು ಶ್ರೀಲಂಕಾಕ್ಕೆ ತೆರಳಿದ್ದ 7 ಜೆಡಿಎಸ್ ಮುಂಖಂಡರು ಅಲ್ಲಿ ನಡೆದ ಬಾಂಬ್ ಬ್ಲಾಸ್ಟ್ನಲ್ಲಿ ಮೃತಪಟ್ಟಿದ್ದು, ಅವರ ಮನೆಯಲ್ಲಿ ಸೂತಕದ ಚಾಯೆ ನಿರ್ಮಾಣವಾಗಿದೆ.
ಮನೆಯವರ ಸಾವಿನ ಸುದ್ದಿ ಕೇಳಿ ಮೃತರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಮನೆಗಳು ಜನರಿಲ್ಲದೆ ಬೀಕೋ ಅನ್ನುತ್ತಿವೆ. ನಿನ್ನೆ ಮೃತರ ಮನೆಗಳಿಗೆ ಭೇಟಿ ನೀಡಿದ ರಾಜಕೀಯ ಮುಖಂಡರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಆದರೆ ಇಂದು ಮೃತರ ಮನೆಗಳಲ್ಲಿ ಜನರ ಸುಳಿವೇ ಇಲ್ಲ. ರಾಜಕೀಯ ಮುಖಂಡರು ಶ್ರೀಲಂಕಾದಿಂದ ಮೃತದೇಹ ತರಲು ಶ್ರಮಿಸುತ್ತಿದ್ದಾರೆ.
ನೆಲಮಂಗಲ ಪಟ್ಟಣದ ಸುಭಾಷ್ ನಗರದಲ್ಲಿರುವ ಶಿವಕುಮಾರ್ ಮನೆ ಮತ್ತು ನೆಲಮಂಗಲ ನ್ಯೂ ಟೌನ್ ಲ್ಲಿರುವ ಲಕ್ಷ್ಮೀನಾರಾಯಣ್ ಮನೆಗಳಲ್ಲಿ ಸೂತಕ ವಾತಾವರಣವಿದ್ದು. ಸಂಬಂಧಿಕರು ಮೃತ ದೇಹಕ್ಕಾಗಿ ಎದುರು ನೋಡುತ್ತಿದ್ದಾರೆ.