ಚಿಕ್ಕಬಳ್ಳಾಪುರ: ಜಾತಿ, ಧರ್ಮಗಳ ಸಾಮರಸ್ಯ ನೋಡಿದ್ದೇವೆ. ಇದಕ್ಕೆಲ್ಲ ಮಾದರಿ ಎಂಬಂತೆ ಈ ಊರಿನ ಹಿಂದೂ-ಮುಸ್ಲಿಮರು ರಂಜಾನ್ ಆಚರಣೆ ಹಾಗೂ ದೇವಸ್ಥಾನದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ.
ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು - mentor
ಮುರಗಮಲ್ಲಾ ದರ್ಗಾ ಬಳಿ ಹಿಂದೂ-ಮುಸ್ಲಿಮರು ಭಾವೈಕ್ಯತೆ ಮೆರೆದಿರುವುದು ಆದರ್ಶಪ್ರಾಯವಾಗಿದೆ. ಮಸೀದಿ ಹಾಗೂ ದೇವಸ್ಥಾನಗಳಲ್ಲಿ ಪೂಜೆ ನಿರ್ವಹಿಸುವ ಅರ್ಚಕರಿಗೆ ಸನ್ಮಾನಿಸಿ ಒಬ್ಬರಿಗೊಬ್ಬರು ಶುಭ ಕೋರಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಸುಪ್ರಸಿದ್ಧ ಸ್ಥಳವಾದ ಮುರಗಮಲ್ಲಾ ದರ್ಗಾ ಬಳಿ ಹಿಂದೂ-ಮುಸ್ಲಿಮರು ಭಾವೈಕ್ಯತೆ ಮೆರೆದಿರುವುದು ಆದರ್ಶಪ್ರಾಯವಾಗಿದೆ. ಮಸೀದಿ ಹಾಗೂ ದೇವಸ್ಥಾನಗಳಲ್ಲಿ ಪೂಜೆ ನಿರ್ವಹಿಸುವ ಅರ್ಚಕರಿಗೆ ಸನ್ಮಾನಿಸಿ ಒಬ್ಬರಿಗೊಬ್ಬರು ಶುಭ ಕೋರಿದ್ದಾರೆ.
ಪ್ರತಿಯೊಂದು ಧರ್ಮದಲ್ಲಿಯೂ ಶಾಂತಿಯನ್ನು ಕಾಪಾಡಲೆಂದೆ ಸೂಚನೆ ನೀಡಿದ್ದಾರೆ. ಇದನ್ನು ನಮ್ಮ ದೇಶದಲ್ಲಿನ ಜನರು ಪಾಲಿಸುತ್ತಿದ್ದಾರೆ ಎಂದು ಒಗ್ಗಟ್ಟಾಗಿ ಹಿಂದೂ-ಮುಸ್ಲಿಂ ಮುಖಂಡರು ಎತ್ತಿ ಹಿಡಿದಿದ್ದಾರೆ. ನಂತರ ಹಿಂದೂ ಹಾಗೂ ಮುಸ್ಲಿಮರ ಮಂತ್ರಗಳನ್ನು ಪಟಿಸಿ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.