ಕರ್ನಾಟಕ

karnataka

ವಿಶ್ವಕಪ್‌ನಲ್ಲಿಂದು ಇಂಗ್ಲೆಂಡ್‌ v/s ದಕ್ಷಿಣ ಆಫ್ರಿಕಾ: ಕಾಮೆಂಟರಿ ಬಾಕ್ಸ್‌ನಲ್ಲಿ ಸಚಿನ್‌!

By

Published : May 30, 2019, 10:25 AM IST

ಆರು ವಿಶ್ವಕಪ್​​ಗಳಿಂದ ಅತೀ ಹೆಚ್ಚು ರನ್​ ಸಿಡಿಸಿರುವ ದಾಖಲೆ ಹೊಂದಿರುವ ಲಿಟ್ಲ್‌ ಮಾಸ್ಟರ್​, 2003ರ ವಿಶ್ವಕಪ್​​ನಲ್ಲಿ 673 ರನ್​ ಗಳಿಕೆ ಮಾಡಿರುವ ದಾಖಲೆ ಹೊಂದಿದ್ದಾರೆ.

ಮಾಸ್ಟರ್​ ಬ್ಲಾಸ್ಟರ್​ ಸಚಿನ್​

ಲಂಡನ್​:ಇಂದಿನಿಂದ ಮುಂದಿನ 45 ದಿನಗಳ ಕಾಲ ಲಂಡನ್​ ಹಾಗೂ ವೇಲ್ಸ್​​​ನಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್‌ ಮಹಾಮೇಳ ನಡೆಯಲಿದ್ದು, ಪ್ರಶಸ್ತಿಗಾಗಿ 10 ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯದಲ್ಲಿ ವಿಶ್ವದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್‌ ಕಾಮೆಂಟೇಟರ್ ಆಗಿ ಇದೇ ಮೊದಲ ಬಾರಿಗೆ ಕಾರ್ಯ ನಿರ್ವಹಿಸಲಿದ್ದಾರೆ.

ಇಂದು ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದ ಕಾಮೆಂಟೇಟರ್​ ಆಗಿ ಸಚಿನ್​ ತೆಂಡೂಲ್ಕರ್‌ ಕಾರ್ಯನಿರ್ವಹಿಸಲಿದ್ದಾರೆ. ದಿ ಓವಲ್​ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಸಚಿನ್​ ಕಾಮೆಂಟರಿ ಬಾಕ್ಸ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಭಾರತದಿಂದ ಮಾಜಿ ನಾಯಕ ಸೌರವ್ ಗಂಗೂಲಿ, ಹರ್ಷಾ ಬೋಗ್ಲೆ, ಸಂಜಯ್​ ಮಂಜ್ರೇಕರ್​ ಸೇರಿದಂತೆ ಪ್ರಖ್ಯಾತ ಕ್ರಿಕೆಟಿಗರು ಕಾಮಂಟೇಟರ್ಸ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇವರಲ್ಲಿ ಮೂವರು ಮಹಿಳಾ ಕಾಮಂಟೇಟರ್ಸ್​ ಕೂಡ ಸೇರಿದ್ದಾರೆ.

2015ರ ವಿಶ್ವಕಪ್​ ವಿನ್ನಿಂಗ್​ ಕ್ಯಾಪ್ಟನ್​ ಮೈಕಲ್​ ಕ್ಲಾರ್ಕ್​ ಮೊದಲ ಬಾರಿಗೆ ವರ್ಲ್ಡ್‌ಕಪ್​ನಲ್ಲಿ ವೀಕ್ಷಕ ವಿವರಣೆಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ABOUT THE AUTHOR

...view details