ಮುಂಬೈ: ವಿಶ್ವಕಪ್ಗೆ ತಮ್ಮನ್ನು ಆಯ್ಕೆಮಾಡಲಿಲ್ಲವೆಂದು ಕೋಪಗೊಂಡಿದ್ದ ಅಂಬಾಟಿ ರಾಯುಡು ವಿಶ್ವಕಪ್ ನೋಡಲು 3ಡಿ ಗ್ಲಾಸ್ ಆರ್ಡರ್ ಮಾಡಿರುವೆ ಎಂದು ಟ್ವೀಟ್ ಮಾಡಿದ್ದರು.
ತಮ್ಮನ್ನು ಆಯ್ಕೆಯನ್ನು ಮಾಡದಿದ್ದಕ್ಕೆ ರಾಯುಡು, ವಿಶ್ವಕಪ್ ವೀಕ್ಷಿಸಲು ಸಲುವಾಗಿ ಈಗಷ್ಟೆ ಹೊಸ 3ಡಿ ಕನ್ನಡಕವನ್ನು ಆರ್ಡರ್ ಮಾಡಿದ್ದೇನೆಂದು ಟ್ವೀಟ್ ಮಾಡಿದ್ದರು.
ತಮ್ಮನ್ನು ಕೈಬಿಟ್ಟು ಬೇರೆ ಆಟಗಾರರನ್ನು ತೆಗೆದುಕೊಂಡಿರುವುದಕ್ಕೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ರಾಯುಡು ಟ್ವೀಟ್ಗೆ ಗೌತಮ್ ಗಂಭೀರ್ ಸೇರಿದಂತೆ ಹಲವು ಅಭಿಮಾನಿಗಳು ಅಸಮಧಾನ ಹೊರ ಹಾಕಿದ್ದರು.
ರಾಯುಡು ಅವರಿಗೆ ಈ ಸಂದರ್ಭದಲ್ಲಿ ಅಸಮಧಾನ ಬರುವುದು ಸಾಮಾನ್ಯ, ತಂಡಕ್ಕೆ ಆಯ್ಕೆಯಾಗದಿದ್ದಾಗ ಯಾವುದೇ ಆಟಗಾರನಾದರು ಇದೇ ವರ್ತಿಸುತ್ತಾರೆ, ಆದರೆ ಇದು ಯಾವುದೇ ನಿಯಮ ಮೀರಿದಂತಾಗುವುದಿಲ್ಲ ಆದ್ದರಿಂದ ರಾಯುಡು ಮೇಲೆ ಯಾವುದೆ ಕ್ರಮದ ಅಗತ್ಯವಿಲ್ಲ ಎಂದಿದ್ದಾರೆ.
ಅಲ್ಲದೆ ರಾಯುಡುರನ್ನ ವಿಶ್ವಕಪ್ ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆಮಾಡಿಕೊಂಡಿದ್ದೇವೆ. ವಿಶ್ವಕಪ್ಗೆ ಇನ್ನು 40ಕ್ಕೂ ಹೆಚ್ಚು ದಿನಗಳಿದೆ. ಈ ವೇಳೆ ತಂಡದ ಬ್ಯಾಟ್ಸ್ಮನ್ ಗಾಯಗೊಂಡರೆ ರಾಯುಡು ತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.