ಕರ್ನಾಟಕ

karnataka

ETV Bharat / briefs

ಸುಶಾಂತ್​ ಸಾವಿನ ಪ್ರಕರಣ: ಸಿದ್ದಾರ್ಥ್​ ಪಿಥಾಣಿಗೆ 14 ದಿನ ನ್ಯಾಯಾಂಗ ಬಂಧನ - ಎನ್​ಸಿಬಿ

ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಸಿದ್ಧಾರ್ಥ್ ಪಿಥಾಣಿಯನ್ನು 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತಿಳಿಸಿದೆ.

ಸುಶಾಂತ್​ ಸಿಂಗ್​ ರಜಪೂತ್​
ಸುಶಾಂತ್​ ಸಿಂಗ್​ ರಜಪೂತ್​

By

Published : Jun 4, 2021, 5:13 PM IST

ಮುಂಬೈ:ಸುಶಾಂತ್ ಸಿಂಗ್ ರಜಪೂತ್ ಸಾವು ಮತ್ತು ಮಾದಕವಸ್ತು ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಸಿದ್ಧಾರ್ಥ್ ಪಿಥಾಣಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

"ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಸಿದ್ಧಾರ್ಥ್ ಪಿಥಾಣಿಯನ್ನು 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ" ಎಂದು ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತಿಳಿಸಿದೆ.

ಇನ್ನು ಪಿಥಾಣಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ, 1985ರ ಹಲವು ವಿಭಾಗಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಬಂಧನದ ನಂತರ, ಮುಂಬೈನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಎಂಎಂ) ನ್ಯಾಯಾಲಯವು ಪಿಥಾಣಿಯನ್ನು ಜೂನ್ 1 ರವರೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಸ್ಟಡಿಗೆ ರಿಮಾಂಡ್ ಮಾಡಿದೆ.

ಇದಕ್ಕೂ ಮುನ್ನ ಗುರುವಾರದಂದು, ಎನ್‌ಸಿಬಿ ಸುಶಾಂತ್ ಅವರ ಬಾಡಿಗಾರ್ಡ್​ನನ್ನು ಸತತ ಎರಡನೇ ದಿನ ಕರೆದು ವಿಚಾರಣೆ ನಡೆಸಿದೆ. ಇದಲ್ಲದೇ ನಟನ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಹರೀಶ್ ಖಾನ್ ಎಂಬ ಡ್ರಗ್ ಪೆಡ್ಲರ್‌ನನ್ನು ಎನ್​ಸಿಬಿ ಬಂಧಿಸಿದೆ.

ABOUT THE AUTHOR

...view details