ಕರ್ನಾಟಕ

karnataka

ETV Bharat / briefs

ಫೈನಲ್​​​ಗೆ ಲಗ್ಗೆ ಇಟ್ಟ ಮುಂಬೈ... ಸೋತ ಚೆನ್ನೈಗಿದೆ ಮತ್ತೊಂದು ಚಾನ್ಸ್..! - ಉಪಾಂತ್ಯ

ಬುಧವಾರ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಇದರಲ್ಲಿ ವಿಜೇತ ತಂಡದ ಜೊತೆಗೆ ಚೆನ್ನೈ ಮೇ 10ರಂದು ಎರಡನೇ ಕ್ವಾಲಿಫೈಯರ್ ಆಡಲಿದೆ. ದ್ವಿತೀಯ ಕ್ವಾಲಿಫೈಯರ್​ನಲ್ಲಿ ಗೆದ್ದ ಟೀಮ್​​ ಮೇ 12ರಂದು ಮುಂಬೈ ಇಂಡಿಯನ್ಸ್ ಜೊತೆಗೆ ಪ್ರಶಸ್ತಿಗಾಗಿ ಸೆಣಸಾಡಲಿದೆ.

ಮುಂಬೈ

By

Published : May 7, 2019, 11:19 PM IST

ಚೆನ್ನೈ:ಐಪಿಎಲ್​ನ ಮೊದಲ ಕ್ವಾಲಿಫೈಯರ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್​ ಕಿಂಗ್ಸ್ ಅನ್ನು ಆರು ವಿಕೆಟ್​​ಗಳಿಂದ ಮಣಿಸಿ ಮೊದಲ ತಂಡವಾಗಿ ಉಪಾಂತ್ಯ ಪ್ರವೇಶಿಸಿದೆ.

ಚೆನ್ನೈ ನೀಡಿದ್ದ 132 ರನ್​ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ರೋಹಿತ್ ಪಡೆ 18.3 ಓವರ್​ನಲ್ಲಿ ನಾಲ್ಕು ವಿಕೆಟ್​ ಕಳೆದುಕೊಂಡು ಗುರಿ ಮುಟ್ಟಿದೆ.

ಆರಂಭಿಕರಾದ ರೋಹಿತ್​ ಶರ್ಮ(4) ಹಾಗೂ ಡಿಕಾಕ್(8) ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಈ ವೇಳೆ ಕ್ರಿಸ್​ಗೆ ಆಗಮಿಸಿದ ಸ್ಫೋಟಕ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

54 ಎಸೆತದಲ್ಲಿ 71 ಸಿಡಿಸಿದ ಸೂರ್ಯಕುಮಾರ್​ಗೆ 28 ಬಾರಿಸುವ ಮೂಲಕ ಇಶಾನ್ ಕಿಶನ್ ಉತ್ತಮ ಸಾಥ್ ನೀಡಿದರು.

ಚೆನ್ನೈ ಪರ ಇಮ್ರಾನ್ ತಾಹಿರ್ ಎರಡು ವಿಕೆಟ್ ಕಿತ್ತರೆ, ಹರ್ಭಜನ್ ಸಿಂಗ್ ಹಾಗೂ ದೀಪಕ್ ಚಹರ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ಬುಧವಾರ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಇದರಲ್ಲಿ ವಿಜೇತ ತಂಡದ ಜೊತೆಗೆ ಚೆನ್ನೈ ಮೇ 10ರಂದು ಎರಡನೇ ಕ್ವಾಲಿಫೈಯರ್ ಆಡಲಿದೆ. ದ್ವಿತೀಯ ಕ್ವಾಲಿಫೈಯರ್​ನಲ್ಲಿ ಗೆದ್ದ ಟೀಮ್​​ ಮೇ 12ರಂದು ಮುಂಬೈ ಇಂಡಿಯನ್ಸ್ ಜೊತೆಗೆ ಪ್ರಶಸ್ತಿಗಾಗಿ ಸೆಣಸಾಡಲಿದೆ.

ABOUT THE AUTHOR

...view details