ಕರ್ನಾಟಕ

karnataka

ETV Bharat / briefs

ಭಾರತ ಎ ತಂಡದ ವಿರುದ್ಧ ಮೊದಲ ಜಯ ಪಡೆದ ಶ್ರೀಲಂಕಾ ಎ... ಸರಣಿ ಗೆಲ್ಲುವ ಆಸೆ ಜೀವಂತ! - worldcup

ಶ್ರೀಲಂಕಾ ಎ ವಿರುದ್ಧ ಟೆಸ್ಟ್ ಸರಣಿ ಹಾಗೂ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ ಎ ತಂಡ ಇಂದು ನಡೆದ ಪಂದ್ಯದಲ್ಲಿ ಸೋಲುನುಭವಿಸುವ ಮೂಲಕ ಸರಣಿಯಲ್ಲಿ ಮೊದಲ ಬಾರಿಗೆ ಪರಾಜಯ ಕಂಡಿದೆ.

Lankan

By

Published : Jun 10, 2019, 10:19 PM IST

ಬೆಳಗಾವಿ:ಟೆಸ್ಟ್ ಸರಣಿ ಹಾಗೂ ಎರಡು ಏಕದಿನ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಪ್ರವಾಸಿ ಶ್ರೀಲಂಕಾ ಎ ತಂಡ ಡಕ್ವರ್ಥ್ ಲೂಯಿಸ್ ನಿಯಮದಂತೆ ಕೊನೆಗೂ ಗೆಲುವಿನ ನಗೆ ಬೀರಿದೆ.

ಇಲ್ಲಿನ ಆಟೋನಗರದ ಕೆಎಸ್​ಸಿಎ ಮೈದಾನದಲ್ಲಿ ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ವರುಣನ ಕೃಪೆಯಿಂದ ಡಕ್ವರ್ಥ್ ಲೂಯಿಸ್ ನಿಯಮದಂತೆ ಶ್ರೀಲಂಕಾ ‌ತಂಡ 6 ವಿಕೆಟ್ ಗೆಲುವು ದಾಖಲಿಸಿತು. ಐದು ಏಕದಿನ ಸರಣಿಯಲ್ಲಿ ಹೀಗಾಗಲೆ ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ ಎ ತಂಡ ಇಂದು ನಡೆದ ಪಂದ್ಯದಲ್ಲಿ ಸೋಲುನುಭವಿಸಿತು. ಮೂರನೇ ಪಂದ್ಯ ಗೆಲ್ಲುವ ಮೂಲಕ ಶ್ರೀಲಂಕಾ ಸರಣಿ ಜಯಿಸುವ ಆಸೆಯನ್ನು ಜೀವಂತವಾಗಿಟ್ಟುಕೊಳ್ಳುವಂತೆ ಮಾಡಿದೆ.

ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡಕ್ಕೆ ಪಿ.ಛೋಪ್ರಾ ಭರ್ಜರಿ ಶತಕ (129) ಹಾಗೂ ದೀಪಕ್ ಹೂಡಾ ಅರ್ಧ ಶತಕ (53) ರನ್ ಸಿಡಿಸಿ ಗಮನ ಸೆಳೆದರು. ಉಳಿದಂತೆ ನಾಯಕ‌ ಇಶಾನ್ ಕಿಶನ್ (25), ಶಿವಂ ದುಬೆ (28) ಹಾಗೂ ವಾಷಿಂಗ್ಟನ್ ‌ಸುಂದರ್ (26) ರನ್ ದಾಖಲಿಸಿ ತಂಡಕ್ಕೆ ‌ನೆರವಾದರು.‌ ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 292 ರನ್ ದಾಖಲಿಸಿತು.

ಶತಕ ಸಿಡಿಸಿದ ಪ್ರಶಾಂತ್​ ಛೋಪ್ರಾ

ಭಾರತದ 293 ರನ್​ಗಳ ಸವಾಲನ್ನು ಬೆನ್ನತ್ತಿದ ಶ್ರೀಲಂಕಾ ‌ಎ ತಂಡ ಉತ್ತಮ‌ ಆರಂಭ ಪಡೆಯಿತು. ನಿರೋಶನ್ ಡಿಕ್ವೆಲ್ಲಾ(62), ಸಂಗೀತ ಕೂರೇ (88), ಶೆಹಾನ್​ ಜಯಸೂರ್ಯ (66) ಅಮೋಘ ಅರ್ಧಶತಕ‌ ಸಿಡಿಸಿದರು. ಶ್ರೀಲಂಕಾ ‌43.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 266 ರನ್ ದಾಖಲಿಸಿದ್ದ ವೇಳೆ‌ ಮಳೆ ಬಂದ ಕಾರಣ ಪಂದ್ಯಾಟ‌ ಸ್ಥಗಿತಗೊಳಿಸಲಾಯಿತು. ‌

ಕೊನೆಗೆ ಡಕ್ವರ್ಥ್ ಲೂಯಿಸ್ ನಿಯಮದಂತೆ ಶ್ರೀಲಂಕಾ ತಂಡ 6 ವಿಕೆಟ್ ಗೆಲುವು ದಾಖಲಿಸಿದೆ ಎಂದು ಘೋಷಿಸಲಾಯಿತು. 10 ಓವರ್​ಗಳಲ್ಲಿ 36 ರನ್​ ನೀಡಿ 5 ವಿಕೆಟ್​ ಪಡೆದ ಚಮಿಕಾ ಕರುಣರತ್ನೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮುಂದಿನ ಪಂದ್ಯ ಜೂನ್​13 ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ.

ABOUT THE AUTHOR

...view details