ಮಂಗಳೂರು: ಶೀಘ್ರವಾಗಿ ಮಳೆ ಬರಲೆಂದು ಪ್ರಾರ್ಥಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಇಂದು ಬೆಳಗ್ಗೆ ವಿಶೇಷ ಪರ್ಜನ್ಯ ಹೋಮ, ಪರ್ಜನ್ಯ ಜಪ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಬ್ರಹ್ಮಶ್ರೀ ವಿಠ್ಠಲದಾಸ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.
ಕರಾವಳಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಮಳೆಯಿಲ್ಲದೆ ಬರದ ಪರಿಸ್ಥಿತಿ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜೂನ್ 6 ರಂದು ರಾಜ್ಯದ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಪರ್ಜನ್ಯ ಜಪ, ಹೋಮ ನಡೆಸಲು ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಕದ್ರಿಯಲ್ಲಿ ವಿಶೇಷ ಪರ್ಜನ್ಯ ಹೋಮ, ಜಪ ನೆರವೇರಿಸಲಾಯಿತು.
ಮಳೆಗಾಗಿ ಕದ್ರಿಯ ಮಂಜುನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಈ ಸಂದರ್ಭ ಕದ್ರಿ ದೇವಾಲಯದ ಆಡಳಿತ ಸಮಿತಿಯ ಸದಸ್ಯೆ ಚಂದ್ರಕಲಾ ದೀಪಕ್ ಮಾತನಾಡಿ, ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಸರಕಾರ ಹೊರಡಿಸಿದ ಸುತ್ತೋಲೆಯಂತೆ ಇಂದು ಬೆಳಗ್ಗೆ ಕದ್ರಿ ಶ್ರೀ ಮಂಜುನಾಥೇಶ್ವರ ಕ್ಷೇತ್ರದಲ್ಲಿ ಪರ್ಜನ್ಯ ಜಪ ಹಾಗೂ ಹೋಮ ನಡೆಸಲಾಯಿತು. ದೇವಸ್ಥಾನದ ಬ್ರಹ್ಮಶ್ರೀ ವಿಠ್ಠಲದಾಸ ತಂತ್ರಿಯವರ ಹಾಗೂ ಇತರ ಪುರೋಹಿತರ ನೇತೃತ್ವದಲ್ಲಿ ಈ ಹೋಮ ಅಚ್ಚುಕಟ್ಟಾಗಿ ನೆರವೇರಿದೆ.
ಇಡೀ ಕರ್ನಾಟಕದಲ್ಲಿ ಈ ಬಾರಿ ಅತೀ ಕಡಿಮೆ ಮಳೆಯಾಗಿದೆ. ಆದ್ದರಿಂದ ಮಳೆಗಾಗಿ ವಿಶೇಷ ವಿಶೇಷ ಹೋಮ ಮಾಡಲಾಗಿದೆ. ಮಳೆ ಬಂದು ನದಿಗಳು ತುಂಬಿ, ರೈತರಿಗೆ ಸಾಕಷ್ಟು ಬೆಳೆಯಾಗಲಿ, ಜನತೆಯ ನೀರಿನ ಕೊರತೆಯನ್ನು ನೀಗಿಸಲಿ ಎಂಬ ಕಾರಣಕ್ಕೆ ಈ ಹೋಮ ಮಾಡಲಾಗಿದೆ. ಈ ಹೋಮದಿಂದ ಮುಂದೆ ಧಾರಕಾರ ಮಳೆ ಸುರಿದು ವರುಣದೇವನ ಕೃಪೆಯಾಗಲಿ ಎಂದು ಹೇಳಿದರು.