ಕರ್ನಾಟಕ

karnataka

ETV Bharat / briefs

ಸಂವಿಧಾನದ ರಕ್ಷಣೆಗೆ ಬಿಜೆಪಿಯನ್ನು ಸೋಲಿಸಿ: ದಲಿತ ನಾಯಕ ಶೇಖರ ಕುಕ್ಕೇಡಿ - mithun rai

ದ.ಕ.ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಂಸದರಾಗಿರುವ ನಳಿನ್ ಕುಮಾರ್ ಕಟೀಲು ಅವರು ದಲಿತರಿಗೋಸ್ಕರ ಯಾವುದೇ ಯೋಜನೆಗಳನ್ನು ತಂದಿಲ್ಲ. ಆದರೆ ಕಾಂಗ್ರೆಸ್ ಸರಕಾರ ದಲಿತರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ದಲಿತರ ಏಳಿಗೆಗೆ ಶ್ರಮಿಸುವ ಕಾಂಗ್ರೆಸ್​ಗೆ ನಿಮ್ಮ ಮತ ನೀಡಿ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕದ ಅಧ್ಯಕ್ಷ ಶೇಖರ್ ಕುಕ್ಕೇಡಿ ಕರೆ ನೀಡಿದ್ದಾರೆ.

ದಲಿತ ನಾಯಕ ಶೇಖರ ಕುಕ್ಕೇಡಿ

By

Published : Apr 12, 2019, 3:16 AM IST

ಮಂಗಳೂರು: ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ರಚನೆ ಮಾಡಿರುವ ಸಂವಿಧಾನವನ್ನು ರಕ್ಷಣೆ ಮಾಡಬೇಕಾದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಲೋಕಸಭಾ ಅಭ್ಯರ್ಥಿಯನ್ನು‌ ಸೋಲಿಸುವುದು ದ.ಕ.ಜಿಲ್ಲೆಯ ಎಲ್ಲಾ ದಲಿತರ ಗುರಿಯಾಗಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕದ ಅಧ್ಯಕ್ಷ ಶೇಖರ್ ಕುಕ್ಕೇಡಿ ಕರೆ ನೀಡಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕುವರೆ ವರ್ಷಗಳ ಕಾಲ ಈ ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಬದುಕು ಬಹಳ ದುಸ್ತರವಾಗಿದೆ. ಈ ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ನಾಶ ಮಾಡುವುದೇ ಬಿಜೆಪಿಯವರ ಅಜೆಂಡವಾಗಿದೆ. ಅಲ್ಲದೆ‌ ಮನುಸ್ಮೃತಿ ಯನ್ನು ಈ ದೇಶದ ಸಂವಿಧಾನವಾಗಿಸುವುದೇ ಅವರ ಮೂಲ ಉದ್ದೇಶ ಎಂದು ಅವರು ಹೇಳಿದರು.

ದಲಿತ ನಾಯಕ ಶೇಖರ ಕುಕ್ಕೇಡಿ
ಅಲ್ಲದೆ ದ.ಕ.ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಂಸದರಾಗಿರುವ ನಳಿನ್ ಕುಮಾರ್ ಕಟೀಲು ಅವರು ದಲಿತರಿಗೋಸ್ಕರ ಯಾವುದೇ ಯೋಜನೆಗಳನ್ನು ತಂದಿಲ್ಲ. ಆದರೆ ಕಾಂಗ್ರೆಸ್ ಸರಕಾರ ದಲಿತರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಯುವಕರ ಕಣ್ಮಣಿ, ದಲಿತರ ಬಗ್ಗೆ ಕಾಳಜಿಯುಳ್ಳ, ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಯುವ ನಾಯಕ ಮಿಥುನ್ ರೈವರನ್ನು ಗೆಲ್ಲಿಸುವ ಮುಖಾಂತರ ಈ ದೇಶದ ಸಂವಿಧಾನವನ್ನು ರಕ್ಷಣೆ ಮಾಡಬೇಕು ಎಂದು ಶೇಖರ್ ಕುಕ್ಕೇಡಿ ಎಲ್ಲಾ ದಲಿತ ವರ್ಗದವರಿಗೆ ಕರೆ ನೀಡಿದರು.

ಈ ಸಂದರ್ಭ ದ.ಕ.ಜಿಲ್ಲಾ ಕಾಂಗ್ರೆಸ್‌ನ ಕಾರ್ಯದರ್ಶಿ ಪ್ರೇಮನಾಥ ಬಳ್ಳಾಲ್ ಬಾಗ್, ಪರಿಶಿಷ್ಟ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್, ಕಾರ್ಪೊರೇಟರ್ ನಾಗವೇಣಿ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details