ಕೊಯಮತ್ತೂರು:ಎಟಿಎಂವೊಂದರ ಮುಂದೆ ಹಣ ಡ್ರಾ ಮಾಡಲು ನಿಂತಿದ್ದ ಗ್ರಾಹಕರು ಅದರೊಳಗೆ ಕುಳಿತಿದ್ದ ಹಾವೊಂದನ್ನ ನೋಡಿ ಹೌಹಾರಿರುವ ಘಟನೆ ತಮಿಳುನಾಡಿನ ತನ್ನೀರ್ಪಂಡಲ್ನ ಪೀಕಮ್ಡು ಪ್ರದೇಶದಲ್ಲಿ ನಡೆದಿದೆ.
ಎಟಿಎಂನೊಳಗೆ ಅಡಗಿದ್ದ ನಾಗಪ್ಪ... ಆಮೇಲಾಗಿದ್ದೇನು? - ಉರಗತಜ್ಞ
ಎಟಿಎಂ ಹತ್ತಿರ ಹಣ ಡ್ರಾ ಮಾಡಿಕೊಳ್ಳಲು ಬಂದವರಿಗೆ ನಾಗರ ಹಾವು ನೋಡಿ ಏಕಾಏಕಿ ಶಾಕ್ ಆಗಿದ್ದು, ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಎಟಿಎಂನೊಳಗೆ ಹಾವು ಪ್ರತ್ಯಕ್ಷ
ಇಲ್ಲಿನ ಐಡಿಬಿಐ ಬ್ಯಾಂಕ್ನ ಎಟಿಎಂ ಒಳಗೆ ನಾಗರ ಹಾವೊಂದು ಕುಳಿತುಕೊಂಡಿತ್ತು. ಅದನ್ನ ನೋಡಿರುವ ಗ್ರಾಹಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಉರಗತಜ್ಞನೋರ್ವನಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿರುವ ಉರಗ ರಕ್ಷಕ ಸುರಕ್ಷಿತವಾಗಿ ಹಾವಿನ ರಕ್ಷಣೆ ಮಾಡಿ, ತದನಂತರ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.