ಲಂಡನ್:ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಕೊಹ್ಲಿ ಪಡೆ ಉತ್ತಮ ಪ್ರಾರಂಭ ಪಡೆದುಕೊಂಡಿದ್ದು, ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಐಸಿಸಿ ವಿಶ್ವಕಪ್: ಹೆಬ್ಬೆರಳಿನ ಸ್ಕ್ಯಾನ್ಗೆ ಒಳಗಾಗಲಿರುವ ಟೀಂ ಇಂಡಿಯಾ ಓಪನರ್!
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿ ಶತಕ ಸಿಡಿಸಿದ್ದ ಆರಂಭಿಕ ಆಟಗಾರ ಶಿಖರ್ ಧವನ್, ಹೆಬ್ಬೆರಳಿನ ಸ್ಕ್ಯಾನ್ಗೆ ಒಳಗಾಗಲಿದ್ದಾರೆ ಎನ್ನಲಾಗಿದೆ.
ಇದರ ಮಧ್ಯೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಶಿಖರ್ ಧವನ್, ಹೆಬ್ಬೆರಳಿನ ಸ್ಕ್ಯಾನ್ಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ. ಆಸ್ಟ್ರೇಲಿಯಾದ ವೇಗದ ಬೌಲರ್ ಕೌಂಟರ್ ನೇಲ್ ಎಸೆದ ಚೆಂಡು ಅವರ ಹೆಬ್ಬೆರಳಿಗೆ ಬಿದ್ದಿರುವ ಕಾರಣ ಅದು ಊದಿಕೊಂಡಿದ್ದು, ಇದೀಗ ಸ್ಕ್ಯಾನ್ಗೆ ಒಳಗಾಗಲಿದ್ದಾರಂತೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 109 ಎಸೆತಗಳಲ್ಲಿ 117 ರನ್ ಗಳಿಸಿದ್ದ ಶಿಖರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವುದರ ಜತೆಗೆ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಇನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶಿಖರ್ ಕ್ಷೇತ್ರ ರಕ್ಷಣೆ ಸಹ ಮಾಡಿರಲಿಲ್ಲ. ಅವರ ಜಾಗದಲ್ಲಿ ರವೀಂದ್ರ ಜಡೇಜಾ ಭಾಗಿಯಾಗಿದ್ದರು. ಟೀಂ ಇಂಡಿಯಾ ಗುರುವಾರ ನ್ಯೂಜಿಲೆಂಡ್ ಜತೆ ತನ್ನ ಮೂರನೇ ಪಂದ್ಯ ಆಡಲಿದೆ.