ತ್ರಿಶೂರ್(ಕೇರಳ): ಹತ್ತನೇ ತರಗತಿ ಪರೀಕ್ಷೆ ಬರೆಯಲು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಬಾಲಕಿಯೋರ್ವಳು ಕುದುರೆಯಲ್ಲಿ ಬಂದಿದ್ದು ಸದ್ಯ ಸಾಕಷ್ಟು ಸುದ್ದಿ ಮಾಡುತ್ತಿದೆ.
ಬಾಲಕಿ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಮಹೀಂದ್ರ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತ್ರಿಶೂರ್ನಲ್ಲಿರುವ ಆಕೆಯ ಪರಿಚಿತರು ಇದ್ದರೆ ನನಗೆ ತಿಳಿಸಿ. ಆ ಬಾಲಕಿ ಹಾಗೂ ಕುದುರೆ ಫೋಟೋವನ್ನು ನಾನು ಕ್ಲಿಕ್ಕಿಸಬೇಕು. ಆ ಫೋಟೋವನ್ನು ನನ್ನ ಮೊಬೈಲ್ನ ಸ್ಕ್ರೀನ್ ಸೇವರ್ ಆಗಿ ಮಾಡಿಕೊಳ್ಳುತ್ತೇನೆ. ಆಕೆಯೇ ನನ್ನ ಪಾಲಿನ ಹೀರೋ ಎಂದು ಮೆಚ್ಚುಗೆ ಸಾಲನ್ನು ಆನಂದ್ ಮಹೀಂದ್ರ ಬರೆದುಕೊಂಡಿದ್ದಾರೆ