ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಎನ್ಡಿಎಗೆ ಟಕ್ಕರ್ ನೀಡಲು ಸಾಕಷ್ಟು ಪ್ರಯತ್ನ ನಡೆಸಿದ್ದ ಯುಪಿಎ ಮೋದಿ ಅಲೆಯಲ್ಲಿ ಕೊಚ್ಚಿಹೋಗಿದೆ.
ಕೇರಳದ ತಿರುವನಂತಪುರದಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಶಶಿ ತರೂರ್ ಗೆಲುವಿನ ನಗೆ ಬೀರಿದ್ದಾರೆ. ಆದರೆ ರಾಷ್ಟ್ರಮಟ್ಟದಲ್ಲಿ ಯುಪಿಎ ಭಾರಿ ನಿರಾಸೆ ಮೂಡಿಸಿದ್ದು, ಬ್ಯಾಟ್ಸ್ಮನ್ ಶತಕ ಬಾರಿಸಿದ ಹೊರತಾಗಿಯೂ ತಂಡ ಸೋತಾಗ ಆಗುವ ಹತಾಶೆ ಸದ್ಯ ಉದ್ಭವವಾಗಿದೆ ಎಂದು ತರೂರ್ ಹೇಳಿದ್ದಾರೆ.