ಕರ್ನಾಟಕ

karnataka

ETV Bharat / briefs

'ಗೇಮ್ ಚೇಂಜರ್​​'​ನಲ್ಲಿ ಡೇಟ್ ಚೇಂಜ್​ ಬಗ್ಗೆ ಮಾತು... ಸ್ಪಷ್ಟನೆಯಲ್ಲೇ ಮತ್ತಷ್ಟು ಗೊಂದಲ ಮೂಡಿಸಿದ ಅಫ್ರಿದಿ ಹೇಳಿಕೆ - ಶಾಹಿದ್ ಅಫ್ರಿದಿ

ಸದ್ಯ ಶಾಹಿದ್ ಅಫ್ರಿದಿ ತಮ್ಮ ಅಟೋಬಯೋಗ್ರಫಿ 'ಗೇಮ್ ಚೇಂಜರ್​​'ನಲ್ಲಿ 1996ರಲ್ಲಿ ದಾಖಲೆಯ ವೇಗದ ಶತಕ ಸಿಡಿಸಿದ ವೇಳೆ ತಮ್ಮ ವಯಸ್ಸು 19 ಆಗಿತ್ತು, 16 ಎನ್ನುವುದು ತಪ್ಪು ಎಂದು ದೀರ್ಘಕಾಲದ ಗೊಂದಲಕ್ಕೆ ಅಂತ್ಯ ಹಾಡಿದ್ದಾರೆ.

ಶಾಹಿದ್ ಅಫ್ರಿದಿ

By

Published : May 3, 2019, 10:18 AM IST

ಹೈದರಾಬಾದ್:ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಸ್ಫೋಟಕ ಬ್ಯಾಟ್ಸ್​ಮನ್​ ಶಾಹಿದ್ ಅಫ್ರಿದಿ ತಮ್ಮ ಜೀವನಚರಿತ್ರೆಯಲ್ಲಿ ಅಪರೂಪದ ಮಾಹಿತಿ ಹಂಚಿಕೊಂಡಿದ್ದಾರೆ.

ಕೀನ್ಯಾದ ನೈರೋಬಿಯಲ್ಲಿ 1996ರಲ್ಲಿ ಶ್ರೀಲಂಕಾ ವಿರುದ್ಧ 37 ಎಸೆತದಲ್ಲಿ ವಿಶ್ವ ದಾಖಲೆಯ ಶತಕ ಬಾರಿಸಿದ್ದರು. ಅಫ್ರಿದಿ ಈ ಶತಕ ಸಿಡಿಸುವ ವೇಳೆ 16 ವರ್ಷ ವಯಸ್ಸು ಎಂದು ದಾಖಲೆಯ ಪುಟ ಸೇರಿತ್ತು.

ಸದ್ಯ ತಮ್ಮ ಅಟೋಬಯೋಗ್ರಫಿ 'ಗೇಮ್ ಚೇಂಜರ್​​'ನಲ್ಲಿ 1996ರಲ್ಲಿ ದಾಖಲೆಯ ಶತಕ ಸಿಡಿಸಿದ ವೇಳೆ ತಮ್ಮ ವಯಸ್ಸು 19 ಆಗಿತ್ತು, 16 ಎನ್ನುವುದು ತಪ್ಪು ಎಂದು ದೀರ್ಘಕಾಲದ ಗೊಂದಲಕ್ಕೆ ಅಂತ್ಯ ಹಾಡಿದ್ದಾರೆ.

ಗೇಮ್ ಚೇಂಜರ್ ಅಟೋಬಯೋಗ್ರಫಿ​

"ನಾನು ಹುಟ್ಟಿದ್ದು 1975ರಲ್ಲಿ. ಶತಕ ಸಿಡಿಸಿದ ಸಂದರ್ಭದಲ್ಲಿ ನನ್ನ ವಯಸ್ಸು 19 ಆಗಿತ್ತು. ಪ್ರಸ್ತುತ 16 ಎಂದು ದಾಖಲಾಗಿರುವುದು ತಪ್ಪು" ಎಂದು ಗೇಮ್​​ ಚೇಂಜರ್​ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಫ್ರಿದಿ ಸ್ಪಷ್ಟನೆಯಲ್ಲೇ ಗೊಂದಲ ಇನ್ನಷ್ಟು ಹೆಚ್ಚಾಗಿದೆ. 1975ರಲ್ಲಿ ಜನಿಸಿದ್ದೆ ಎಂದಿರುವ ಅಫ್ರಿದಿ 1996ರ ವೇಳೆ 21 ವಯಸ್ಸಾಗಿರಬೇಕು. ಆದರೆ ಅಫ್ರಿದಿ 19 ಎಂದಿರುವುದು ಕುತೂಹಲ ಮೂಡಿಸಿದೆ.

ABOUT THE AUTHOR

...view details