ಮಂಗಳೂರು:ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಪ್ರತ್ಯೇಕವಾದ ಕೈಗಾರಿಕಾ ಟೌನ್ಶಿಪ್ ಪ್ರಾಧಿಕಾರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಕೈಗಾರಿಕೆಗಳ ಅಭಿವೃದ್ಧಿಗೆ ನಗರಾಭಿವೃದ್ಧಿ ಸಚಿವರು ಬಿಟ್ಟ ಆ ರಾಮಬಾಣ ಯಾವುದು? - mangalore
ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಪ್ರತ್ಯೇಕವಾದ ಕೈಗಾರಿಕಾ ಟೌನ್ಶಿಪ್ ಪ್ರಾಧಿಕಾರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಈ ಆದೇಶ ಕಾನೂನು ಆದ ಬಳಿಕ ಒಂದು ಪ್ರದೇಶದ ಕೈಗಾರಿಕಾ ಸಂಸ್ಥೆಗಳೆಲ್ಲವೂ ಪ್ರಾಧಿಕಾರ ವ್ಯಾಪ್ತಿಗೆ ಒಳಪಡುತ್ತವೆ. ಅವರೇ ತೆರಿಗೆ ಸಂಗ್ರಹ ಮಾಡಿ, ಅವರೇ ಆ ಪ್ರದೇಶದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಾರೆ. ಅಲ್ಲದೆ, ಅಭಿವೃದ್ಧಿಕಾಮಗಾರಿಗಳನ್ನು ಸ್ವತಂತ್ರವಾಗಿ ಕೈಗೊಳ್ಳಲು ಈ ಪ್ರಾಧಿಕಾರವನ್ನು ರಚಿಸಲಾಗಿದೆ. ಅಲ್ಲದೆ, ರಾಜ್ಯದ ಮುನಿಸಿಪಲ್ ಕಾಯ್ದೆಗೆ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ತಂದು ಈ ಪ್ರಾಧಿಕಾರ ರಚಿಸಲಾಗುವುದು ಎಂದು ವಿವರಿಸಿದರು.
ಈ ಪ್ರಾಧಿಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ. 30ರಷ್ಟನ್ನು ಸ್ಥಳೀಯ ಆಡಳಿತಕ್ಕೆ ನೀಡಬೇಕಾಗಿದೆ. ಉಳಿದ ಶೇ. 70 ತೆರಿಗೆಯನ್ನು ಪ್ರಾಧಿಕಾರಕ್ಕೆ ಉಪಯೋಗಿಸುವ ಅಧಿಕಾರ ಇದೆ. ಈ ಮೂಲಕ ಅಲ್ಲಿಯ ಅಭಿವೃದ್ಧಿ, ಮೂಲ ಸೌಕರ್ಯಗಳನ್ನು ನೀಡುವ ಕಾರ್ಯವನ್ನು ಮಾಡಬೇಕಾಗುತ್ತದೆ. ಈ ಪ್ರಾಧಿಕಾರದಲ್ಲಿ 8 ಮಂದಿ ಸದಸ್ಯರಿದ್ದು, ಅದರಲ್ಲಿ 5 ಮಂದಿ ಕೈಗಾರಿಕಾ ಪ್ರದೇಶದ ಸದಸ್ಯರಿರುತ್ತಾರೆ. ಓರ್ವ ಕೈಗಾರಿಕಾ ಹಾಗೂ ವಾಣಿಜ್ಯ ಸಂಘದ ಸದಸ್ಯರಿರುತ್ತಾರೆ. ಓರ್ವ ನಗರಾಭಿವೃದ್ಧಿ ಇಲಾಖೆಯ ಸದಸ್ಯ ಹಾಗೂ ಮತ್ತೋರ್ವ ಸರ್ಕಾರದಿಂದ ನೇಮಕಗೊಂಡ ಸದಸ್ಯರಿರುತ್ತಾರೆ ಎಂದು ಯು.ಟಿ.ಖಾದರ್ ವಿವರಿಸಿದರು.