ಕರ್ನಾಟಕ

karnataka

ETV Bharat / briefs

ರಂಜಾನ್ ದಿನ ಬದಲಾಗುತ್ತಾ ಮತದಾನದ ಸಮಯ..? - ಸುಪ್ರೀಂ ಕೋರ್ಟ್

ಮೊದಲ ನಾಲ್ಕು ಹಂತದ ಮತದಾನ ಬೆಳಗ್ಗೆ ಏಳು ಗಂಟೆಗೆ ಆರಂಭವಾಗಿ ಸಂಜೆ ಆರು ಗಂಟೆಗೆ ಮುಕ್ತಾಯವಾಗಿತ್ತು. ಸದ್ಯ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಬೆಳಗ್ಗೆ ಏಳರ ಬದಲಾಗಿ ಐದು ಗಂಟೆ ಆರಂಭಿಸಬೇಕೆಂದು ಮನವಿ ಮಾಡಲಾಗಿದೆ.

ಸರ್ವೋಚ್ಛ ನ್ಯಾಯಾಲಯ

By

Published : May 2, 2019, 12:26 PM IST

ನವದೆಹಲಿ:ಮುಸ್ಲಿಮರ ಪವಿತ್ರ ಹಬ್ಬ ರಂಜಾನ್​​ ಹಿನ್ನೆಲೆಯಲ್ಲಿ ಮುಂದಿನ ಮೂರು ಹಂತದ ಲೋಕಸಭಾ ಚುನಾವಣೆ ಮತದಾನದ ಸಮಯವನ್ನು ಪರಿಷ್ಕರಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ಮೊದಲ ನಾಲ್ಕು ಹಂತದ ಮತದಾನ ಬೆಳಗ್ಗೆ ಏಳು ಗಂಟೆಗೆ ಆರಂಭವಾಗಿ ಸಂಜೆ ಆರು ಗಂಟೆಗೆ ಮುಕ್ತಾಯವಾಗಿತ್ತು. ಸದ್ಯ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಬೆಳಗ್ಗೆ ಏಳರ ಬದಲಾಗಿ ಐದು ಗಂಟೆ ಆರಂಭಿಸಬೇಕೆಂದು ಮನವಿ ಮಾಡಲಾಗಿದೆ.

ಅರ್ಜಿಯನ್ನು ಪರಿಗಣಿಸಿರುವ ಸರ್ವೋಚ್ಛ ನ್ಯಾಯಾಲಯ, ಅರ್ಜಿಯ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ರಂಜಾನ್ ಉಪವಾಸ ಇದೇ ಭಾನುವಾರ(ಮೇ.5)ರಂದು ಆರಂಭವಾಗಲಿದೆ. ಐದನೇ ಹಂತ ಮೇ.6ರಂದು ನಡೆಯಲಿದೆ. ಮೇ.12 ಹಾಗೂ ಮೇ.19ರಂದು ಕೊನೆಯ ಎರಡು ಹಂತಗಳ ಮತದಾನ ಜರುಗಲಿದೆ.

ABOUT THE AUTHOR

...view details