ಕರ್ನಾಟಕ

karnataka

ETV Bharat / briefs

ಇಹಲೋಕ ತ್ಯಜಿಸಿದ ಚಂದನವನದ ನಿರ್ದೇಶಕ..! - Shree Nanjunda

ಕನ್ನಡ ಚಿತ್ರರಂಗದಲ್ಲಿ ತೆರೆಮರೆಯಲ್ಲಿ ಕಥೆಗಾರನಾಗಿ ಗುರುತಿಸಿಕೊಡಿದ್ದ ನಂಜುಂಡ ಹಲವಾರು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

ಶ್ರೀ ನಂಜುಂಡ

By

Published : Apr 24, 2019, 1:14 AM IST

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಬರಹಗಾರ ಹಾಗು ನಿರ್ದೇಶಕ ನಂಜುಂಡ ಮಂಗಳವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪ್ರಕಾಶ್ ರೈ ಹೀರೋ ಆಗಿ ಅಭಿನಯಿಸಿದ್ದ 'ಕನಸಲ್ಲೂ ನೀನೆ ಮನಸ್ಸಲ್ಲೂ ನೀನೆ' ಹಾಗೂ ಗಾಯಕ ರಾಜೇಶ್ ಕೃಷ್ಣನ್ ನಟನೆಯ 'ಮಲೋಡಿ' ಎಂಬ ಸಿನಿಮಾಗಳನ್ನ ನಂಜುಂಡ ನಿರ್ದೇಶನ ಮಾಡಿದ್ದರು.

ಕನ್ನಡ ಚಿತ್ರರಂಗದಲ್ಲಿ ತೆರೆಮರೆಯಲ್ಲಿ ಕಥೆಗಾರನಾಗಿ ಗುರುತಿಸಿಕೊಡಿದ್ದ ನಂಜುಂಡ ಹಲವಾರು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

ಪತ್ನಿ ಹಾಗೂ ಮಗಳೊಂದಿಗೆ ನಿರ್ದೇಶಕ ಶ್ರೀ ನಂಜುಂಡ

ಹಲವಾರು ಸಿನಿಮಾಗಳಿಗೆ ಕಥೆಗಾರರಾಗಿ ಕಾರ್ಯ ನಿರ್ವಹಿಸಿದ್ದರೂ ನಂಜುಂಡ ಸಿನಿಮಾಗಳಲ್ಲಿ ತಮ್ಮ ಹೆಸರನ್ನು ಹಾಕಿಸಿಕೊಂಡಿರಲಿಲ್ಲ. ಕೆಲ ನಿರ್ದೇಶಕರು ನಂಜುಂಡ ಅವರಿಗೆ ಒಂದಿಷ್ಟು ಹಣವನ್ನ ಕೊಟ್ಟು, ಕಥೆಯನ್ನ ಆ ನಿರ್ದೇಶಕರು ತಾನೇ ಬರೆದಿದ್ದು ಎಂದು ಹಾಕಿಕೊಳ್ಳುತ್ತಿದ್ದರು ಎನ್ನುವುದು ನಂಜುಂಡ ಗೆಳೆಯರು ಹೇಳುವ ಮಾತು.

ನಂಜುಂಡರವರು ಸದ್ಯ ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ನಂಜುಂಡರವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಕಂಬನಿ ಮಿಡಿದಿದೆ.

ABOUT THE AUTHOR

...view details