ಕರ್ನಾಟಕ

karnataka

ETV Bharat / briefs

ವೃದ್ದೆಯ ಮನೆಗೆ ನುಗ್ಗಿದ ಮಳೆ ನೀರು: ಬದುಕು ಜಲಾವೃತ

ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದ ಬಂಜಾರ ಸಮುದಾಯದ 75 ವರ್ಷದ ವಯೋವೃದ್ದೆಯ ಮನೆ ಮಳೆ ಅವಾಂತರದಿಂದ ಜಲಾವೃತಗೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು ಸ್ಥಳೀಯ ಆಡಳಿತ ಸಂಸ್ಥೆ, ಅಧಿಕಾರಿಗಳು, ಜನ ಪ್ರತಿನಿಧಿಗಳು ಮಾತ್ರ ಸಹಾಯಕ್ಕೆ ಮಾಂದಾಗಿಲ್ಲ.

Saidapura old women house surrounded by rain water
Saidapura old women house surrounded by rain water

By

Published : Jun 29, 2020, 4:15 PM IST

ಗುರುಮಠಕಲ್:ತಾಲೂಕಿನ ಸೈದಾಪುರ ಪಟ್ಟಣದ ವಾರ್ಡ 3ರ ನಿವಾಸಿ 75 ವರ್ಷದ ವಯೋವೃದ್ದೆ ಲಕ್ಷ್ಮೀ ಬಾಯಿ ನಾಮದೇವ ಚವ್ಹಾಣ ಎಂಬುವರ ಮನೆಗೆ ಮಳೆ ನೀರು ನುಗ್ಗಿದ್ದು ಸಂಕಷ್ಟ ಎದುರಿಸುವಂತಾಗಿದೆ.

ಇತ್ತೀಚೆಗೆ ಸುರಿದ ಮಳೆಯಿಂದಾಗಿ ಬಂಜಾರ ಸಮುದಾಯದ ವಯೋವೃದ್ದೆ ಲಕ್ಷ್ಮೀ ಬಾಯಿ ನಾಮದೇವ ಚವ್ಹಾಣವ ಅವರ ಮನೆಗೆ ನೀರು ನುಗ್ಗಿದ್ದು, ಮನೆ ಸುತ್ತಲು ನೀರು ಆವರಿಸಿ ಕ್ರೀಮಿ ಕಿಟಗಳು ಸೇರಿದಂತೆ ರೋಗದ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.

ದುಡಿಯುವವರಿಲ್ಲದೆ ಮೊಮ್ಮಗನೊಂದಿಗೆ ಬದುಕುತ್ತಿರುವ ಮಹಿಳೆಗೆ, ಮಳೆ ಅವಾಂತರ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಕೂಡಲೇ ಗ್ರಾಮ ಪಂಚಾಯತ್ ಇಲಾಖೆ ಪರಿಶೀಲಿಸಿ ಸರಕಾರದ ವತಿಯಿಂದ ಸಹಾಯ ಮಾಡುವಂತೆ ಹಾಗೂ ಜನಪ್ರತಿನಿಧಿಗಳು ವಯೋವೃದ್ದಿಯ ಬದುಕಿಗೆ ಆಸರೆಯಾಗುವಂತೆ ಬಡಾವಣೆಯ ನಿವಾಸಿ ಅರ್ಜುನ ಚವ್ಹಾಣ ಮನವಿ ಮಾಡಿದ್ದಾರೆ.

ಸಂಕಷ್ಟದಲ್ಲಿರುವವರಿಗೆ ಸರಕಾರದ ವಿವಿಧ ಯೋಜನೆಗಳು ಅಸ್ಥಿತ್ವದಲ್ಲಿದ್ದೂ, ಇವು ಈ ವಿದಧ ಸಮಸ್ಯೆಯಲ್ಲಿರುವವರಿಗೆ ತಲುಪಬೇಕೆಂಬುವುದು ಪ್ರಜ್ಞಾವಂತರ ಅಭಿಪ್ರಾಯ.

ABOUT THE AUTHOR

...view details