ಕರ್ನಾಟಕ

karnataka

ETV Bharat / briefs

ಜೈಲಿನ ನರಕ ಯಾತನೆ ನೆನೆದು ಬಿಕ್ಕಿ ಬಿಕ್ಕಿ ಅತ್ತ ಸಾಧ್ವಿ ಪ್ರಗ್ಯಾ ಸಿಂಗ್​ - ದಿಗ್ವಿಜಯ್​ ಸಿಂಗ್

ತಾವು ಜೈಲಿನಲ್ಲಿದ್ದಾಗ ಪೊಲೀಸರು ಕೊಟ್ಟ ದೈಹಿಕ ಹಿಂಸೆಯನ್ನು ನೆನೆದ ಸಾಧ್ವಿ ವೇದಿಕೆಯಲ್ಲೇ ಕಣ್ಣೀರಿಟ್ಟರು, ಬೆಂಬಲಿಗರು ಭಾರತ್​ ಮಾತಾಕಿ ಜೈ ಘೋಷಣೆ ಕೂಗುವ ಮೂಲಕ ಅವರನ್ನು ಬೆಂಬಲಿಸಿದರು.

ಸಾಧ್ವಿ ಪ್ರಗ್ಯಾ ಸಿಂಗ್​

By

Published : Apr 18, 2019, 6:04 PM IST

ಭೋಪಾಲ್​:ದಿಗ್ವಿಜಯ್​ ಸಿಂಗ್​ ವಿರುದ್ಧ ಸ್ಪರ್ಧಿಸಿರುವ ಮಾಲೆಗಾಂವ್​ ಸ್ಫೋಟ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್​ ಅವರು ಕಾರ್ಯಕ್ರಮವೊಂದರಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ತಾವು ಜೈಲಿನಲ್ಲಿದ್ದಾಗ ಪೊಲೀಸರು ಕೊಟ್ಟ ದೈಹಿಕ ಹಿಂಸೆಯನ್ನು ನೆನೆದ ಸಾಧ್ವಿ ವೇದಿಕೆಯಲ್ಲೇ ಕಣ್ಣೀರಿಟ್ಟರು, ಬೆಂಬಲಿಗರು ಭಾರತ್​ ಮಾತಾಕಿ ಜೈ ಘೋಷಣೆ ಕೂಗುವ ಮೂಲಕ ಅವರನ್ನು ಬೆಂಬಲಿಸಿದರು.

ಯಾವ ಕಾರಣಕ್ಕಾಗಿ ನನ್ನನ್ನು ಕರೆಸಲಾಗುತ್ತಿದೆ ಎಂಬುದನ್ನು ತಿಳಿಸದೆ ಪೊಲೀಸ್​ ಠಾಣೆಗೆ ಕರೆಸಿ ಹಿಗ್ಗಾ ಮುಗ್ಗಾ ಹೊಡೆದರು. ಪೊಲೀಸರ ಒಂದು ಸಾರಿ ಲಾಠಿ ಪ್ರಹಾರ ಮಾಡಿದರೆ ಮೈ ಜುಮ್ಮೆನ್ನುತ್ತಿತ್ತು. ಇಡೀ ನರಮಂಡಲವನ್ನೇ ಹಿಂಡಿ ಹಿಪ್ಪೆ ಮಾಡಿದಂತಾಗುತ್ತಿತ್ತು. ನಾನು ಬದುಕುತ್ತೇನೆ ಎಂಬ ನಂಬಿಕೆಯೇ ಇರಲಿಲ್ಲ ಎಂದು ಪ್ರಗ್ಯಾ ಸಿಂಗ್​ ಅವರು ಹೇಳುತ್ತಾ ಕಣ್ಣೀರೊರೆಸಿಕೊಂಡರು.

ABOUT THE AUTHOR

...view details