ನವದೆಹಲಿ: ಕ್ರಿಕೆಟ್ ಅಭಿಮಾನಿಯಾದ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ಗೆ ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್ ತಂಡದ ಆಟಗಾರರ ಸಹಿಯಿರುವ ಬ್ಯಾಟ್ ಉಡುಗೊರೆಯಾಗಿ ನೀಡಿದ್ದನ್ನು ಸಚಿನ್ ತೆಂಡೂಲ್ಕರ್ ಮೆಚ್ಚಿಕೊಂಡಿದ್ದಾರೆ. ಮಾಲ್ಡೀವ್ಸ್ನಲ್ಲಿ ಕ್ರಿಕೆಟ್ ಪ್ರಚುರಪಡಿಸುತ್ತಿರುವುದಕ್ಕೆ ಅವರು ಧನ್ಯವಾದವನ್ನೂ ಅರ್ಪಿಸಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷರಿಗೆ ಕ್ರಿಕೆಟ್ ಬ್ಯಾಟ್ ಉಡುಗೊರೆ, ಮೋದಿಗೆ ಸಚಿನ್ ಥ್ಯಾಂಕ್ಸ್ - ಕ್ರಿಕೆಟ್
ವಿದೇಶ ಪ್ರವಾಸದಲ್ಲಿರುವ ನರೇಂದ್ರ ಮೋದಿ, ಕ್ರಿಕೆಟ್ ಪ್ರಿಯರಾದ ಮಾಲ್ಡೀವ್ಸ್ ಜನತೆಗೆ ಮೈದಾನಗಳನ್ನು ಸ್ಥಾಪಿಸಿಕೊಟ್ಟು ಕ್ರಿಕೆಟ್ ಜನಪ್ರಿಯಗೊಳಿಸಲು ಭಾರತ ನೆರವು ನೀಡಲಿದೆ ಎಂದು ಮಾತು ಕೊಟ್ಟಿರುವುದನ್ನು ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ.
ಕ್ರಿಕೆಟ್ ಪ್ರಿಯರಾದ ಮಾಲ್ಡೀವ್ಸ್ ಜನತೆಗೆ ಮೈದಾನಗಳನ್ನು ಸ್ಥಾಪಿಸಿಕೊಟ್ಟು ಕ್ರಿಕೆಟ್ ಜನಪ್ರಿಯಗೊಳಿಸಲು ಭಾರತ ನೆರವು ನೀಡಲಿದೆ. ಮಾಲ್ಡೀವ್ಸ್ ಕ್ರಿಕೆಟ್ ಆಟಗಾರರಿಗೆ ಬಿಸಿಸಿಐ ವತಿಯಿಂದ ತರಬೇತಿ ನೀಡಲಿದೆ. ಈ ಮೂಲಕ ಎರಡೂ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿ ಎಂದು ಪ್ರಧಾನಿ ಮೋದಿ ತಿಳಿಸಿದರು.
ಮೋದಿ ಕ್ರಿಕೆಟ್ ಬ್ಯಾಟ್ ನೀಡುತ್ತಿರುವ ಫೊಟೋವನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಟ್ವೀಟ್ಗೆ ಕಾಮೆಂಟ್ ಮಾಡಿರುವ ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್, ವಿಶ್ವಕಪ್ ಸಂದರ್ಭದಲ್ಲಿ ಕ್ರಿಕೆಟ್ ಪ್ರಮೋಟ್ ಮಾಡುತ್ತಿರುವುದಕ್ಕೆ ಧನ್ಯವಾದ ಅರ್ಪಿಸಿದ್ದು, ಮಾಲ್ಡೀವ್ಸ್ನಲ್ಲಿ ಜನರು ಆದಷ್ಟು ಬೇಗ ಕ್ರಿಕೆಟ್ ಆಡುವುದನ್ನು ನೋಡಲು ಬಯಸುತ್ತೇನೆ ಎಂದರು.