ಕರ್ನಾಟಕ

karnataka

ETV Bharat / briefs

ಸಿಕ್ಸರ್​ಗಳ ಸುರಿಮಳೆಗೈದ ರಸೆಲ್​... ಡೆಲ್ಲಿಗೆ 186 ರನ್​ಗಳ ಗುರಿ ನೀಡಿದ ಕೆಕೆಆರ್​ - ರಸೆಲ್​

ಆ್ಯಂಡ್ರ್ಯೂ ರಸೆಲ್​ 62 , ಕಾರ್ತಿಕ್​ 50 ರನ್​ಗಳ ನೆರವಿನಿಂದ ಕೆಕೆಆರ್​ 20 ಓವರ್​ಗಳಲ್ಲಿ 185 ರನ್​ಗಳನ್ನು ಗಳಿಸಿದೆ.

ಕೆಕೆಆರ್​

By

Published : Mar 30, 2019, 10:11 PM IST

Updated : Mar 30, 2019, 10:19 PM IST

ನವದೆಹಲಿ: ಸತತ ಮೂರನೇ ಪಂದ್ಯದಲ್ಲೂ ತನ್ನ ಅಬ್ಬರ ಮುಂದುವರಿಸಿದ ಆ್ಯಂಡ್ರ್ಯೂ ರಸೆಲ್​ ಕೇವಲ 28 ಎಸೆತಗಳಲ್ಲಿ 62 ರನ್​ಗಳಿಸಿ ತಂಡ 186 ರನ್​ಗಳ ಬೃಹತ್​ ಮೊತ್ತ ಗಳಿಸಲು ನೆರವಾದರು.

ಟಾಸ್​ ಸೋತು ಬ್ಯಾಟಿಂಗ್​ ಇಳಿದ ಕೆಕೆಆರ್​ಗೆ ಡೆಲ್ಲಿ ಬೌಲರ್​ಗಳು ಅಘಾತ ನೀಡಿದರು. ಇಂದು ಮೊದಲ ಪಂದ್ಯವಾಡಿದ ನೇಪಾಳದ ಯುವ ಬೌಲರ್​ ಕೆಕೆಆರ್​ ಪರ ಪದಾರ್ಪಣೆ ಮಾಡಿದ್ದ ನಿಖಿಲ್​ ನಾಯ್ಕ(7) ವಿಕೆಟ್​ ಪಡೆದರು. ನಂತರ ಉತ್ತಪ್ಪ(11)ಹಾಗೂ ನಿತೀಸ್​ ರಾಣಾ(01)ರನ್ನು ಹರ್ಷಲ್​ ಪಟೇಲ್​ ಪೆವಿಲಿಯನ್​ಗಟ್ಟಿದರು. ಕ್ರಿಸ್​ ಲಿನ್​ ಸಹಾ ರಬಡಾ ಬೌಲಿಂಗ್​ನಲ್ಲಿ ಪಂತ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ನಂತರ ಬಂದ ಶುಬ್ಮನ್​ ಗಿಲ್(04)​ ರನ್​ಔಟ್​ ಬಲೆಗೆ ಬಿದ್ದರು.

ಕೇವಲ 9 ಓವರ್​ಗಳಲ್ಲಿ 61 ರನ್​ಗಳಿಸಿ 5 ವಿಕೆಟ್​ ಕಳೆದುಕೊಂಡು ಕಡಿಮೆ ಮೊತ್ತಕ್ಕೆ ಕುಸಿಯುವ ಬೀತಿಯಲ್ಲಿದ್ದ ಕೆಕೆಆರ್​ಗೆ ನಾಯಕ ಕಾರ್ತಿಕ್​(50) ಹಾಗೂ ರಸೆಲ್​(62) 6 ವಿಕೆಟ್​ಗೆ95 ರನ್​ಗಳ ಜೊತೆಯಾಟ ನೀಡಿ ತಂಡವನ್ನು ಸುಸ್ಥಿತಿಗೆ ತಂದರು. ಅಬ್ಬರಿಸುತ್ತಿದ್ದ ರಸೆಲ್​ರನ್ನು ಕ್ರಿಸ್​ ಮೋರಿಸ್​ ಪೆವಿಲಿಯನ್​ಗಟ್ಟಿದರೆ ಕಾರ್ತಿಕ್​ ಅನುಭವಿ ಮಿಶ್ರಾಗೆ ವಿಕೆಟ್​ ಒಪ್ಪಿಸಿದರು.

ನಂತರ ಬಂದ ಬೌಲರ್​ಗಳಾದ ಚಾವ್ಲಾ 5 ಎಸೆತಗಳಲ್ಲಿ 12, ಕುಲ್ದೀಪ್​ 5 ಎಸೆತಗಳಲ್ಲಿ 10 ರನ್​ಗಳಿಸಿ ತಂಡ 185 ರನ್​ಗಳ ಬೃಹತ್​ ಮೊತ್ತ ಪೇರಿಸಲು ನೆರವಾದರು.

Last Updated : Mar 30, 2019, 10:19 PM IST

ABOUT THE AUTHOR

...view details