ಕರ್ನಾಟಕ

karnataka

ETV Bharat / briefs

ಆರ್​ಸಿಬಿಗೆ ಈ ವರ್ಷವೂ ಕಂಟಕರಾದ ಕರ್ನಾಟಕದ ಸ್ಪಿನ್​ ಜೋಡಿ - Royal Challengers Bangalore

2018 ಆವೃತ್ತಿಯಲ್ಲಿ 2 ಪಂದ್ಯಗಳಲ್ಲೂ ಆರ್​ಸಿಬಿಯನ್ನು ಮಣಿಸಿದ್ದ ರಾಜಸ್ಥಾನ ರಾಯಲ್ಸ್​ ಹಿಂದೆ ಕನ್ನಡಿಗರಾದ ಕೆ.ಗೌತಮ್​ ಹಾಗೂ ಶ್ರೇಯಸ್​ ಗೋಪಾಲ್​ ಸ್ಪಿನ್​ ಬೌಲಿಂಗ್​ ನೆರವಾಗಿತ್ತು. ಈಗ ಅದೇ ಸ್ಪಿನ್​ ಜೋಡಿ ಜೈಪುರದಲ್ಲಿ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಮತ್ತೆ ಎಬಿಡಿ, ಕೊಹ್ಲಿಯಂತಾ ಆಟಗಾರರನ್ನೇ ಕಾಡಿದೆ.

karnataka

By

Published : Apr 2, 2019, 9:59 PM IST

ಜೈಪುರ​ :2018 ರ ಸೀಸನ್​ನಲ್ಲಿ ಆರ್​ಸಿಬಿಯನ್ನು ಕಾಡಿದ್ದ ಕನ್ನಡಿಗ ಶ್ರೇಯಸ್​ ಗೋಪಾಲ್​ ಮತ್ತೆ ಆರ್​ಸಿಬಿಯನ್ನು ತನ್ನ ಸ್ಪಿನ್​ ಬಲೆಯಲ್ಲಿ ಕೆಡವುದರಲ್ಲಿ ಮತ್ತೆ ಯಶಸ್ವಿಯಾಗಿದ್ದಾರೆ.

2018 ಆವೃತ್ತಿಯಲ್ಲಿ 2 ಪಂದ್ಯಗಳಲ್ಲೂ ಆರ್​ಸಿಬಿಯನ್ನು ಮಣಿಸಿದ್ದ ರಾಜಸ್ಥಾನ ರಾಯಲ್ಸ್​ ಹಿಂದೆ ಕನ್ನಡಿಗರಾದ ಕೆ.ಗೌತಮ್​ ಹಾಗೂ ಶ್ರೇಯಸ್​ ಗೋಪಾಲ್​ ಸ್ಪಿನ್​ ಬೌಲಿಂಗ್​ ನೆರವಾಗಿತ್ತು. ಈಗ ಅದೇ ಸ್ಪಿನ್​ ಜೋಡಿ ಮತ್ತೆ ಆರ್​ಸಿಬಿಯನ್ನು ಇಂದು ಜೈಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಾಡತೊಡಗಿದೆ.

2018ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೇಯಸ್ ​ಗೋಪಾಲ್ ವಿರಾಟ್​ ಕೊಹ್ಲಿ ಹಾಗೂ ಎಬಿ ಡಿಯನ್ನು ಗೋಪಾಲ್​​ ಔಟ್​ ಮಾಡಿದ್ದರು. ನಂತರ ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಕೊಹ್ಲಿಯನ್ನು ಕೆ.ಗೌತಮ್​ ಔಟ್​ ಮಾಡಿದರೆ ಎಬಿಡಿಯನ್ನು ಗೋಪಾಲ್​ ಪೆವಿಲಿಯನ್​ಗಟ್ಟಿದ್ದರು. ಆ ಪಂದ್ಯದಲ್ಲಿ ಗೋಪಾಲ್​ 16 ರನ್​ ನೀಡಿ 4 ವಿಕೆಟ್​ ಪಡೆದಿದ್ದರು. ಇಂದಿನ ಪಂದ್ಯದಲ್ಲಿ ಗೋಪಾಲ್​ 4ಓವರ್​ನಲ್ಲಿ12 ರನ್​ ನೀಡಿ 3 ವಿಕೆಟ್​ ಪಡೆದಿದ್ದಾರೆ. ಗೌತಮ್​ 3 ಓವರ್​ಗಳಲ್ಲಿ 17 ರನ್​ ನೀಡುವ ಮೂಲಕ ಆರ್​ಸಿಬಿ ರನ್​ ವೇಗಕ್ಕೆ ಕಡಿವಾಣ ಹಾಕಿದ್ದಾರೆ.

ಒಟ್ಟಿನಲ್ಲಿ ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಪ್ಲೇ ಆಫ್​ ತಲುಪದಂತೆ ಮಾಡಿದ್ದ ಈ ಕರ್ನಾಟಕದ ಸ್ಪಿನ್​ ಜೋಡಿ ಈ ಬಾರಿಯೂ ಆರ್​ಸಿಬಿಗೆ ಶಾಕ್​ ನೀಡಿದೆ. ಆರ್​ಸಿಬಿ 20 ಓವರ್​ಗಳಲ್ಲಿ 158 ರನ್​ಗಳಿಸಿದೆ.

ABOUT THE AUTHOR

...view details