ಕರ್ನಾಟಕ

karnataka

ಮಂಕಡ್​ ರನ್ಔಟ್​ ವಿವಾದ: ಕಪಿಲ್​ ದೇವ್​ ದಾರಿ ಹಿಡಿದ ಅಶ್ವಿನ್​... ಬಟ್ಲರ್​ಗೂ ಇದು ಮೊದಲೇನಲ್ಲ

By

Published : Mar 26, 2019, 6:07 PM IST

ವಿವಾದಕ್ಕೆ ಎಡೆಮಾಡಿಕೊಟ್ಟಿರುವ ಮಂಕಡ್​ ರನ್​ಔಟ್​ ಇದೀಗ ಕ್ರಿಕೆಟ್​ ವಲಯಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 11 ವರ್ಷಗಳ ಐಪಿಎಲ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ಆದರೆ, ಈ ರೀತಿ ಔಟ್​ ಮಾಡುವುದದಕ್ಕೆ ಕ್ರಿಕೆಟ್​ ನಿಯಮದಲ್ಲಿ ಅವಕಾಶವಿದೆ ಎಂಬುದು ಗಮನಾರ್ಹ.

mankad

ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್​ ಬಟ್ಲರ್​ ಅವರನ್ನು ಪಂಜಾಬ್​ ತಂಡದ ನಾಯಕ ಅಶ್ವಿನ್ ಮಂಕಡ್​ ರನ್​ಔಟ್​ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ಅದ್ಭುತವಾಗಿ ಬ್ಯಾಟಿಂಗ್​ ನಡೆಸುತ್ತಿದ್ದ ಬಟ್ಲರ್​ 12.5 ನೇ ಓವರ್​ನಲ್ಲಿ ಅಶ್ವಿನ್​ ಬೌಲ್​ ಮಾಡುವುದಕ್ಕೆ ಮೊದಲೆ ಕ್ರೀಸ್​ ಬಿಟ್ಟಿದ್ದರು, ಇದನ್ನು ಗಮನಿಸಿದ ಅಶ್ವಿನ್​ ಬೆಲ್ಸ್​ ಎಗರಿಸಿ ರನ್​ಔಟ್​ ಅಪೀಲ್​ ಮಾಡಿದರು. ಫೀಲ್ಡ್​ ಮೂರನೇ ಅಂಪೈರ್​ ಮೊರೆ ಹೋಗಿ ಔಟ್​ ಎಂದು ತೀರ್ಮಾನ ನೀಡಿದರು.

ಆದರೆ ಈ ರೀತಿ ಔಟ್​ ಮಾಡುವ ಮೂಲಕ ಅಶ್ವಿನ್ ಕ್ರೀಡಾ ಸ್ಪೂರ್ತಿ ಮರೆತಿದ್ದಾರೆಂದು ಅವರ ವಿರುದ್ಧ ಹಲವು ಮಾಜಿ ಕ್ರಿಕೆಟಿಗರು ಕಿಡಿ ಕಾರಿದ್ದಾರೆ. ಆದರೆ ಕ್ರಿಕೆಟ್​ ಲಾ ಬುಕ್​ನಲ್ಲಿ 41.16 ಅಡಿಯಲ್ಲಿ ಬೌಲರ್​ ಬಾಲ್​ ಎಸೆಯುವುದಕ್ಕೂ ಮುನ್ನ ಬ್ಯಾಟ್ಸ್​ಮನ್​ ಕ್ರೀಸ್​ ಬಿಟ್ಟಿದ್ದರೆ ಬೌಲರ್​ ಆತನನ್ನು ರನ್​ಔಟ್​ ಮಾಡಬಹುದು. ಆದರೆ ಈ ರೀತಿ ಔಟ್​ ಮಾಡು ವ ಮುನ್ನ ಬ್ಯಾಟ್ಸ್​ಮನ್​ಗೆ ಕ್ರೀಡಾ ಸ್ಪೂರ್ತಿಯ ದೃಷ್ಟಿಯಿಂದ ಎಚ್ಚರಿಕೆ ನೀಡಬೇಕಾಗುತ್ತದೆ.​

ಇಬ್ಬರು ಆಟಗಾರರಿಗೆ ಮಂಕಡ್​ ಮೊದಲೇನಲ್ಲ

ಔಟ್​ ಮಾಡಿದ ಅಶ್ವಿನ್​ ಹಾಗೂ ಔಟ್​ ಆದ ಬಟ್ಲರ್​ ಇಬ್ಬರಿಗೂ ಇದು ಹೊಸತೇನಲ್ಲ. ಈ ಹಿಂದೆ ಆಶ್ವಿನ್​ ಶ್ರೀಲಂಕಾದ ಲಹೆರು ತಿರುಮಾನೆ ಯನ್ನು ಅವರು ಹೀಗೆಯೇ ಔಟ್ ಮಾಡಿದ್ದರು, ಆದರೆ ಅಂದು ಸಚಿನ್ ತೆಂಡೂಲ್ಕರ್ ಮತ್ತು ನಾಯಕ ವೀರೆಂದ್ರ ಸೆಹ್ವಾಗ್ ಅವರು ಕ್ರೀಡಾಸ್ಪೂರ್ತಿ ಮೆರೆದು ಕ್ರೀಡಾ ನಿಯಮದ ಪ್ರಕಾರ ಔಟ್ ಆಗಿದ್ದರೂ ಸಹ ತಿರುಮಾನೆಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು.

ಬಟ್ಲರ್​ ಔಟ್​ ಆಗಿದ್ದು 2ನೇ ಬಾರಿ

ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಮಂಕಡ್​ಗೆ ಬಲಿಯಾಗುತ್ತಿರುವುದು ಇದು 2ನೇ ಬಾರಿ. ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಸರಣಿಯನ್ನು ಬಟ್ಲರ್ ಮಂಕೆಂಡ್​ಗ್‌ಗೆ ಬಲಿಯಾಗಿದ್ದರು, ಆದರೆ ಲಂಕಾದ ಬೌಲರ್ ಸಚಿತ್ರ ಸೇನಾನಾಯಕೆ ಬಟ್ಲರ್‌ಗೆ ಚೆಂಡು ಎಸೆಯುವ ಮುನ್ನ ಕ್ರೀಸ್ ಬಿಡದಂತೆ ಎಚ್ಚರಿಕೆ ನೀಡಿದ್ದರು, ಆದರೆ ಬಟ್ಲರ್ ಅದನ್ನೇ ಮುಂದುವರೆಸಿದಾಗ ಸಚಿತ್ರ ಬೇಲ್ ಎಗರಿಸಿ ಬಟ್ಲರ್ ಅನ್ನು ಔಟ್ ಮಾಡಿದ್ದರು.

ಕಪಿಲ್ ದೇವ್ ಸಹ ಹೀಗೆ ರನ್‌ಔಟ್ ಮಾಡಿದ್ದರು

ಅಶ್ವಿನ್​ಗಿಂತ ಮೊದಲೆ ಭಾರತಕ್ಕೆ ಮೊದಲ ವಿಶ್ವಕಪ್​ ಕ್ರಿಕೆಟ್​ ತಂದುಕೊಟ್ಟ ಕ್ರಿಕೆಟರ್ ಆದ ಕಪಿಲ್ ದೇವ್ ಸಹ ಒಮ್ಮೆ ಹೀಗೆಯೇ ಬ್ಯಾಟ್ಸ್‌ಮನ್‌ ಒಬ್ಬರನ್ನು ಔಟ್ ಮಾಡಿದ್ದರು, ಆದರೆ ಅಂದೂ ಸಹ ಅವರು ಹಾಗೆ ಔಟ್ ಮಾಡುವ ಮುನ್ನಾ ಬ್ಯಾಟ್ಸ್‌ಮನ್‌ಗೆ ಹಲವು ಬಾರಿ ಎಚ್ಚರಿಕೆ ನೀಡಿ ಔಟ್ ಮಾಡಿದ್ದರು.

ಮೊದಲ ಬಾರಿ ಈ ರೀತಿ ಔಟ್​ ಮಾಡಿದ್ದೆ ಭಾರತೀಯ ಬೌಲರ್

ಭಾರತದ ಬೌಲರ್​ ಮಾಂಕಡ್​ 1947ರಲ್ಲೇ ಈ ರೀತಿ ರನ್​ಔಟ್​ ಮಾಡಿ ಸುದ್ದಿಯಾಗಿದ್ದರು. ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾಗ ಅಲ್ಲಿ ವಿನು ಮಾಂಕಡ್ ಅವರು ಆಸ್ಟ್ರೇಲಿಯಾದ ಆಟಗಾರ ಬಿಲ್ ಬ್ರೌನ್​ ಅವರನ್ನು ಚೆಂಡು ಎಸೆಯುವ ಮುನ್ನವೇ ಕ್ರೀಸ್​ ಬಿಡದಂತೆ ಎರಡು ಬಾರಿ ವಾರ್ನಿಂಗ್​ ಮಾಡಿದ್ದರು. ಆದರೂ ಬ್ರೌನ್ ಮತ್ತೆ ಮತ್ತೆ ಕ್ರೀಸ್​ ಬಿಟ್ಟು ಹೋಗುತ್ತಿದ್ದರಿಂದ ಮಂಕಡ್​ ರನ್​ ಔಟ್​ ಮಾಡಿದ್ದರು. ಈ ರೀತಿ ಔಟ್​ ಮಾಡಿದ್ದನ್ನು ಎದುರಾಳಿ ನಾಯಕ ಡಾನ್ ಬ್ರಾಡ್‌ಮನ್ ಸಹ ಮಂಕಡ್ ಅವರನ್ನು ಸಮರ್ಥಿಸಿಕೊಂಡಿದ್ದರು.

ABOUT THE AUTHOR

...view details