ಬೆಂಗಳೂರು: ರಂಜಾನ್ ಮುಸ್ಲಿಂರ ಪಾಲಿಕೆ ದೊಡ್ಡ ಹಬ್ಬ. ಈ ಹಿನ್ನೆಲೆ ಇಲ್ಲಿನ ಶಿವಾಜಿ ನಗರವೊಂದರಲ್ಲೇ ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ ಸಮೋಸದ ಜತೆಗೆ ಹತ್ತು ಹಲವು ಬಗೆಯ ತಿಂಡಿ ತಯಾರಾಗುತ್ತವೆ.
ರಂಜಾನ್ ಹಬ್ಬದ ಪ್ರಯುಕ್ತ ತಯಾರಿಸಲಾದ ಖಾಧ್ಯಗಳು ಫ್ರೆಜರ್‌ಟೌನ್, ಟ್ಯಾನರಿ ರಸ್ತೆ, ಕೆ.ಆರ್. ಮಾರ್ಕೆಟ್, ಬನ್ನೇರುಘಟ್ಟ ರಸ್ತೆ, ಕೊರಮಂಗಲ ಮತ್ತಿತರ ಕಡೆ ರಂಜಾನ್ ತಿಂಗಳಲ್ಲಿ ಖಾದ್ಯ ಪ್ರಪಂಚವೇ ತೆರೆದುಕೊಂಡಿರುತ್ತದೆ.
ಇಲ್ಲಿ ಹೆಚ್ಚು ಫೇಮಸ್ ಆಗಿರೋದು ಮಾತ್ರ ಶಿವಾಜಿನಗರದ ಸಮೋಸ. ಸಿಹಿ ಖಾದ್ಯಗಳಾದ ಅಫ್ಲಾತೂನ್, ಶಾಹಿ ತುಕಡಾ, ಖವಾ ನಾನ್, ಖುಬಾನಿ ಮಿಟ್ಟಾ, ಗಾಜರ್ ಕ ಹಲ್ವಾ, ಫಾಲುದಾ ಇವುಗಳು ತಿಂಡಿಪ್ರಿಯರ ಬಾಯಿ ಚಪ್ಪರಿಸುವಂತೆ ಮಾಡಿವೆ.
ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಧಮ್ ಬಿರಿಯಾನಿ ಜತೆಗೆ ಹೈದರಾಬಾದ್ ಮತ್ತು ಉತ್ತರ ಭಾರತದ ಸಾಂಪ್ರದಾಯಿಕ ಖಾದ್ಯಗಳಾದ ಮೊಗ್ಲೆ, ಚಿಕನ್, ಪತ್ತರ್ ಗೋಷ್, ಚಿಕನ್ ಕಡಾಯಿ, ಇರಾನಿ ಚಿಕನ್, ಹೈದರಾಬಾದಿ ಹಲೀಮ್‌ಗಳು, ರಂಜಾನ್ ಹಬ್ಬದ ಆಕರ್ಷಣೆಯಾಗಿವೆ.
ಅಂಗಡಿಗಳು ರಾತ್ರಿ 1.30ರವರೆಗೆ ತೆರೆದಿರುತ್ತವೆ ಎನ್ನುತ್ತಾರೆ ಶಿವಾಜಿನಗರದ ವ್ಯಾಪಾರಿ ತಾಜ್ ದಾಶಿದ್.