ಕರ್ನಾಟಕ

karnataka

ETV Bharat / briefs

ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ಇಫ್ತಿಯಾರ್ ಕಿಟ್​ ವಿತರಣೆ - etv bharata

ರಂಜಾನ್​ ಹಬ್ಬದ ಪ್ರಯುಕ್ತ ಇಫ್ತಿಯಾರ್​ ಕಿಟ್​ಗಳನ್ನು ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಬಡ ಜನರಿಗೆ ವಿತರಿಸಲಾಯಿತು.

ಇಫ್ತಿಯಾರ್ ಕಿಟ್​ಗಳನ್ನು ವಿತರಿಸುತ್ತಿರುವುದು

By

Published : May 26, 2019, 2:11 AM IST

ವಿಜಯಪುರ: ಪ್ರತಿ ವರ್ಷದಂತೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಜಮಾತೆ ಇಸ್ಲಾಮಿಕ್ ಹಿಂದ ಹಾಗೂ ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಸಹಯೋಗದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ 10 ಬಡ ಕುಟುಂಬಗಳಿಗೆ ಇಫ್ತಿಯಾರ್ ಕಿಟ್ ವಿತರಣೆ ಮಾಡಲಾಯಿತು.

ಪಟ್ಟಣದ ಸರ್ಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಡ ಕುಟುಂಬಗಳಿಗೆ ಈ ಕಿಟ್​ನ್ನು ವಿತರಿಸಲಾಗಿದೆ. ಅಕ್ಕಿ, ಬೇಳೆ, ಒಳ್ಳೆ ಎಣ್ಣಿ, ಹಿಟ್ಟು, ಸಕ್ಕರೆ ಮುಂತಾದ ಸಾಮಗ್ರಿಗಳನ್ನು ಒಳಗೊಂಡ ಕಿಟ್​ ಇದಾಗಿದೆ.

ಇಫ್ತಿಯಾರ್ ಕಿಟ್​ಗಳನ್ನು ವಿತರಿಸುತ್ತಿರುವುದು

ರಂಜಾನ್​ ಮಾಸದಲ್ಲಿ ಬಡವರು ಕೂಡಾ ಉತ್ತಮ ಊಟ ಮಾಡುವ ನಿಟ್ಟಿನಲ್ಲಿ ಈ ಇಫ್ತಿಯಾರ್ ಕಿಟ್ ವಿತರಣೆ ಮಾಡಲಾಗುತ್ತದೆ. ಮಕ್ಕಳು ಕೂಡ ರಂಜಾನ್ ಮಾಸದಲ್ಲಿ ಗುಣಮಟ್ಟದ ಆಹಾರ ಸೇವಿಸಿ ಖುಷಿಯಾಗಿ ಭಗವಂತನ ನಾಮಸ್ಮರಣೆ ಮಾಡುವಂತಾಗಬೇಕು ಎಂದು ಶಾಲೆಯ ಮುಖ್ಯ ಗುರುಗಳಾದ ಎ.ಎಚ್.ಖಾಜಿ ಹೇಳಿದರು.

ಉಮರ್ ಫಾರುಕ್ ಮೂಲಿಮನಿ, ಯಾಕುಬ್ ಮುದ್ದೇಬಿಹಾಳ ಹಾಗೂ ಜಮಾತೆ ಇಸ್ಲಾಮಿಕ್ ಹಿಂದ್ ಸಂಘಟನೆಯ ಸದಸ್ಯರು ಇದ್ದರು.

ABOUT THE AUTHOR

...view details