ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ತೀವ್ರ ಹತಾಶೆಗೊಳಗಾಗಿರುವ ರಾಹುಲ್ ಗಾಂಧಿ ಸದ್ಯ ಈ ಎಲೆಕ್ಷನ್ ಮೂಡ್ನಿಂದ ಹೊರಬರಲು ತಮ್ಮ ಮುದ್ದಿನ ನಾಯಿ ಜೊತೆ ರೈಡ್ ಹೋಗಿದ್ದಾರೆ.
'ಲೋಕ' ಸೋಲಿನ ಹತಾಶೆ,ಮುದ್ದಿನ ನಾಯಿ ಜೊತೆಗೆ ರಾಗಾ ಜಾಲಿ ರೈಡ್! - ಪಿಡಿ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಹಟತೊಟ್ಟಿದ್ದ ರಾಹುಲ್ ಗಾಂಧಿ ಮತ್ತೆ ನಿರಾಸೆಗೊಳಗಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.
ರಾಗಾ
ಸದ್ಯ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪಿಡಿ ಹೆಸರಿನ ತಮ್ಮ ನೆಚ್ಚಿನ ನಾಯಿ ಜೊತೆಗೆ ಕಾರಿನಲ್ಲಿ ಸುತ್ತಾಡಿರುವ ಫೋಟೋಗಳು ವೈರಲ್ ಅಗಿವೆ. ನೆಟಿಜನ್ಸ್ ಈ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಹಟ ತೊಟ್ಟಿದ್ದ ರಾಹುಲ್ ಗಾಂಧಿ ಮತ್ತೆ ನಿರಾಸೆಗೊಳಗಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.