ಕರ್ನಾಟಕ

karnataka

ETV Bharat / briefs

ಮೋದಿ ದವಡೆಗೆ ಹೊಡೀರಿ ಎಂದ ಶಿವಲಿಂಗೇಗೌಡ ವಿರುದ್ಧ ಕೇಸು ದಾಖಲು - ದೂರು ದಾಖಲು

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತ ಮೋದಿ, ಮೋದಿ ಎನ್ನುವವರ ದವಡೆಗೆ ಹೊಡೆಯಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಅರಸೀಕೆರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೋದಿ ವಿರುದ್ಧ ವಾಗ್ದಾಳಿ, ದೂರು ದಾಖಲು

By

Published : Mar 31, 2019, 2:35 AM IST

ಹಾಸನ/ಅರಸೀಕೆರೆ:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಲಿಂಗೇಗೌಡ ವಿರುದ್ಧ ಕೇಸು ದಾಖಲು

ಮಾರ್ಚ್ 20ರಂದು ಅರಸೀಕೆರೆಯ ಸಿಂಧೂ ಭವನದ ಕಲ್ಯಾಣ ಮಂಟಪದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಶಿವಲಿಂಗೇಗೌಡ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೇ ವೇಳೆ ಮೋದಿ, ಮೋದಿ ಎನ್ನುವವರ ದವಡೆಗೆ ಹೊಡೆಯಿರಿ ಎಂಬ ಲಘುವಾದ ಹೇಳಿಕೆ ನೀಡಿದ್ದರು.

ಮೋದಿ ವಿರುದ್ಧ ವಾಗ್ದಾಳಿ, ದೂರು ದಾಖಲು

ABOUT THE AUTHOR

...view details