ಕರ್ನಾಟಕ

karnataka

ETV Bharat / briefs

ವಿದ್ಯುತ್ ಅವಘಡ:ಬಾಲಕನಿಗೆ ಗಾಯ - ವಿದ್ಯುತ್ ಅವಘಡ

ಕಲಬುರಗಿ ನಗರದ ಖಮರ್​ ಕಾಲೊನಿಯಲ್ಲಿ ವಿದ್ಯುತ್​ ಅವಘಡದಿಂದ ಬಾಲಕನೋರ್ವ ತೀವ್ರವಾಗಿ ಗಾಯಗೊಂಡಿದ್ದಾನೆ. ಜೆಸ್ಕಾಂ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ವಿದ್ಯುತ್​ ಅವಘಡದಿಂದ ದೇಹದ 40 ಪ್ರತಿಷತ ಸುಟ್ಟಿರುವುದು

By

Published : May 19, 2019, 6:05 PM IST

ಕಲಬುರಗಿ:ವಿದ್ಯುತ್ ತಂತಿ ತಗುಲಿ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಖಮರ್ ಕಾಲೊನಿಯಲ್ಲಿ ನಡೆದಿದೆ.

ಮಹಮ್ಮದ್ ರಿಯಾಜುದ್ದಿನ್ (12) ಗಂಭೀರವಾಗಿ ಗಾಯಗೊಂಡ ಬಾಲಕ.

ಮನೆಯ ಮೇಲ್ಚಾವಣಿ ಮೇಲಿಂದ ಹಾದು ಹೋಗಿರುವ ಕರೆಂಟ್ ತಂತಿಯಿಂದ ಅನಾಹುತ ಸಂಭವಿಸಿದೆ. ಆಟವಾಡುತ್ತಿದ್ದ ವೇಳೆ ಬಾಲಕ ವಿದ್ಯುತ್‌ ತಂತಿಯನ್ನು ಮುಟ್ಟಿದ್ದಾನೆ. ಪರಿಣಾಮ ಆತನ ದೇಹದ ಶೇ 40 ಭಾಗ ಸುಟ್ಟು ಹೊಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಆಸ್ಪತ್ರೆಗೆ ದಾಖಲಿಸಲಾಗಿದೆ.

ಜೆಸ್ಕಾಂ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details