ಹುಬ್ಬಳ್ಳಿ: ಕೊರೊನಾ ಎರಡನೇ ಅಲೆ ದೇಶ ಹಾಗೂ ರಾಜ್ಯದಲ್ಲಿ ತನ್ನ ಕಬಂಧ ಬಾಹು ಚಾಚುತ್ತಿರುವ ಹಿನ್ನೆಲೆ ಕೊರೊನಾ ತಡೆಗಟ್ಟಲು ಎಲ್ಲಾ ಕ್ರಮ ಕೈಗೊಳ್ಳಲು ಸರಕಾರ ಪೋಲಿಸ್ ಇಲಾಖೆಗೆ ಆದೇಶ ನೀಡಿದೆ.
ಕೊರೊನಾ ಅಲೆ : ಹಗಲು ರಾತ್ರಿಯನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಆರಕ್ಷಕರು
ಅನಾವಶ್ಯಕವಾಗಿ ಹೊರಗಡೆ ಬರುವ ಜನತೆಗೆ, ಲಾಠಿ ಬೀಸಿ ಜೊತೆಗೆ ಕೊರೊನಾ ಹಾವಳಿ ತಪ್ಪಿಸಲು ಹರಸಾಸಹ ಪಡುತ್ತಿರುವ ಪೊಲೀಸರ ಕಾರ್ಯ ನಿಜಕ್ಕೂ ಮೆಚ್ಚಲೇಬೇಕು..
ಸದ್ಯ ಪೊಲೀಸರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅಷ್ಟಕ್ಕೂ ಅವರು ಉದ್ವಿಗ್ನ ಪರಿಸ್ಥಿತಿಯಲ್ಲಿನ ಕೆಲಸ ಮಾಡುತ್ತಿದ್ದಾರೆ. ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಸಾವಿನ ಸಂಖ್ಯೆ ಏರುತ್ತಿದೆ ಇದರ ನಡುವೆ ಕೊರೊನಾ ತಡೆಗಟ್ಟಲು ತಮ್ಮ ಕುಟುಂಬ ಲೆಕ್ಕಿಸದೆ, ವಾಣಿಜ್ಯ ನಗರಿ ಹುಬ್ಬಳ್ಳಿ ಪೊಲೀಸರು, ಪ್ರತಿಯೊಂದು ವಾಹನಗಳ ಚೆಕ್ ಮಾಡುವುದರ ಜೊತೆಗೆ ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುವಂತಹ ವಾಹನಗಳನ್ನು ತಡೆದು ದಂಡ ವಿಧಿಸಿ ಬುದ್ದಿವಾದ ಹೇಳಿ ಕಳುಹಿಸುತ್ತಿದ್ದಾರೆ.
ಇನ್ನು ಕೊರೊನಾ ಹಾವಳಿ ನೋಡಿದರೆ ಇಂತಹ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿದೆ. ಆದರೆ ಇದನ್ನೆಲ್ಲ ಲೆಕ್ಕಿಸದೆ ನಾಗರಿಕರ ಹಿತಾಸಕ್ತಿಗಾಗಿ ಅವರ ರಕ್ಷಣೆಗಾಗಿ ಪೊಲೀಸರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ಅನಾವಶ್ಯಕವಾಗಿ ಹೊರಗಡೆ ಬರುವ ಜನತೆಗೆ, ಲಾಠಿ ಬೀಸಿ ಜೊತೆಗೆ ಕೊರೊನಾ ಹಾವಳಿ ತಪ್ಪಿಸಲು ಹರಸಾಸಹ ಪಡುತ್ತಿರುವ ಪೋಲಿಸರ ಕಾರ್ಯ ನಿಜಕ್ಕೂ ಶ್ಲಾಘನೀಯ.