ರಾಮನಗರ:ವಾರದೊಳಗಾಗಿ ವಿಳಂಬವಾಗಿರುವ ಪಿಂಚಣಿ ಹಣವನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸವಂತೆ ಅಧಿಕಾರಿಗಳಿಗೆ ಸಂಸದ ಡಿ ಕೆ ಸುರೇಶ ಆದೇಶಿಸಿದ್ದಾರೆ.
ವಾರದೊಳಗೆ ಫಲಾನುಭವಿಗಳಿಗೆ ಪಿಂಚಣಿ ನೀಡಿ- ಅಧಿಕಾರಿಗಳಿಗೆ ಸಂಸದ ಡಿ ಕೆ ಸುರೇಶ್ ತಾಕೀತು
ರಾಮನಗರದ ಜಿಲ್ಲಾ ಪಂಚಾಯತ್ ಭವನದಲ್ಲಿ ಗುರುವಾರ ಅಧಿಕಾರಿಗಳ ಜತೆ ಸಭೆ ನಡೆಸಿದ ಸಂಸದ ಡಿ ಕೆ ಸುರೇಶ ವಿಳಂಬವಾಗುತ್ತಿರುವ ಪಿಂಚಣಿಯನ್ನು ವಾರದೊಳಗಾಗಿ ಫಲಾನುಭವಿಗಳಿಗೆ ತಲುಪಿಸುವಂತೆ ಆದೇಶಿಸಿದರು.
ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ
ನಗರದ ಜಿಲ್ಲಾ ಪಂಚಾಯತ್ ಭವನದಲ್ಲಿ ಅಧಿಕಾರಿಗಳ ಜತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಇದೇ ವೇಳೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ವಿತರಿಸುವಲ್ಲಿ ಅಂಚೆ ಇಲಾಖೆ ವಿಳಂಬ ಮಾಡುತ್ತಿರುವ ಕುರಿತು ಸಂಸದ ಡಿ ಕೆ ಸುರೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.