ಇಸ್ಲಾಮಾಬಾದ್: ಆರ್ಥಿಕ ದಿವಾಳಿಯಲ್ಲಿ ಸಿಲುಕಿ ನೆರೆಯ ಪಾಕ್ ಒದ್ದಾಡುತ್ತಿದ್ದು, ಇದರ ಮಧ್ಯೆ ಅಲ್ಲಿನ ನಿವಾಸಿಗಳಿಗೆ ತಮ್ಮ ಸಂಪತ್ತು ಘೋಷಣೆ ಮಾಡಿ ಜೂನ್ 30ರೊಳಗೆ ತೆರಿಗೆ ಭರಿಸುವಂತೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿಕೊಂಡಿದ್ದಾರೆ.
ನಾಳೆ ಪಾಕಿಸ್ತಾನದ ಬಜೆಟ್ ಮಂಡನೆಯಾಗಲಿದ್ದು, ಅದಕ್ಕೂ ಮುನ್ನಾದಿನವಾದ ಇಂದು ಸಚಿವ ಸಂಪುಟ ಸಭೆ ನಡೆಸಿ, ಈ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಾಕ್ನಲ್ಲಿ 20 ಕೋಟಿ ಜನರಲ್ಲಿ ಕೇವಲ 14 ಲಕ್ಷ ಜನರು ಟ್ಯಾಕ್ಸ್ ತುಂಬುತ್ತಿದ್ದಾರೆ. ಹೀಗಾಗಿ ಪಾಕ್ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.