ಕರ್ನಾಟಕ

karnataka

ETV Bharat / briefs

ವಿಶ್ವಕಪ್​​ನಲ್ಲಿ ಅಪರೂಪದ ದಾಖಲೆ ಬರೆದ ಪಾಕಿಸ್ತಾನ..!

ಟಾಸ್ ಗೆದ್ದು ಪಾಕಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿದ ಆಂಗ್ಲರು ಉತ್ತಮ ಬೌಲಿಂಗ್ ಮಾಡುವಲ್ಲಿ ಎಡವಿದರು. ಪರಿಣಾಮ ನಿಗದಿತ ಐವತ್ತು ಓವರ್​ಗಳಲ್ಲಿ ಪಾಕಿಸ್ತಾನ ಬರೋಬ್ಬರಿ 348 ರನ್ ಗಳಿಸಿತು. ಇದೇ ಇನ್ನಿಂಗ್ಸ್​​ನಲ್ಲಿ ಸರ್ಫರಾಜ್​ ಟೀಂ​ ಅಪರೂಪದ ದಾಖಲೆ ನಿರ್ಮಿಸಿದೆ.

ಪಾಕಿಸ್ತಾನ

By

Published : Jun 3, 2019, 8:43 PM IST

ನಾಟಿಂಗ್​​ಹ್ಯಾಮ್​:ಇಲ್ಲಿನ ಟ್ರೆಂಟ್​​ ಬಿಡ್ಜ್​ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ವಿನೂತನ ದಾಖಲೆ ಬರೆದಿದೆ.

ಟಾಸ್ ಗೆದ್ದು ಪಾಕಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿದ ಆಂಗ್ಲರು ಉತ್ತಮ ಬೌಲಿಂಗ್ ಮಾಡುವಲ್ಲಿ ಎಡವಿದರು. ಪರಿಣಾಮ ನಿಗದಿತ ಐವತ್ತು ಓವರ್​ಗಳಲ್ಲಿ ಪಾಕಿಸ್ತಾನ ಬರೋಬ್ಬರಿ 348 ಗಳಿಸಿತು. ಇದೇ ಇನ್ನಿಂಗ್ಸ್​​ನಲ್ಲಿ ಸರ್ಫರಾಜ್​ ಟೀಂ​ ಅಪರೂಪದ ದಾಖಲೆ ನಿರ್ಮಿಸಿದೆ.

ವಿರಾಟ್ ಪಡೆಗೆ ಸ್ಪೆಷಲ್ ವಿಶ್... ಆಲ್​ ದ ಬೆಸ್ಟ್ ಹೇಳಿದ ಕಾಲ್ಚೆಂಡು ಆಟಗಾರರು...!

ಎಂಟು ವಿಕೆಟ್ ನಷ್ಟಕ್ಕೆ 348 ರನ್​ ಗಳಿಸಿದ ಪಾಕ್​ ತಂಡದಲ್ಲಿ ಯಾವೊಬ್ಬ ಆಟಗಾರನೂ ಮೂರಂಕಿ ಮೊತ್ತ ಅರ್ಥಾತ್ ಶತಕ ಬಾರಿಸಲಿಲ್ಲ. ಮೊಹಮ್ಮದ್ ಹಫೀಜ್ ಸಿಡಿಸಿದ 84 ರನ್​​ ವೈಯಕ್ತಿಕ ಗರಿಷ್ಠ ಗಳಿಕೆ. ಹಫೀಜ್​​ ಹೊರತಾಗಿ ನಾಯಕ ಸರ್ಫರಾಜ್ ಅಹ್ಮದ್(55) ಹಾಗೂ ಬಾಬರ್ ಅಜಮ್​ (63) ಅರ್ಧಶತಕ ಬಾರಿಸಿದ್ದಾರೆ.

ವಿಶೇಷವೆಂದರೆ ಪಾಕಿಸ್ತಾನ 2015ರ ವಿಶ್ವಕಪ್​​ನಲ್ಲಿ ಯುಎಇ ವಿರುದ್ಧ 339 ರನ್​ ಗಳಿಸಿದಾಗ ಯಾವ ಆಟಗಾರನೂ ಶತಕ ಸಿಡಿಸಿರಲಿಲ್ಲ. 1983ರ ವಿಶ್ವಕಪ್​​ನಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 338 ರನ್​ ದಾಖಲಿಸಿತ್ತು. ಆ ವೇಳೆಯಲ್ಲೂ ಶತಕ ಮೂಡಿಬಂದಿರಲಿಲ್ಲ.

ವಿಶ್ವಕಪ್​ನಲ್ಲಿ ಶತಕವಿಲ್ಲದೆ ತಂಡದ ಅತ್ಯಧಿಕ ಗಳಿಕೆಗಳು :

  • ಪಾಕಿಸ್ತಾನ Vs ಇಂಗ್ಲೆಂಡ್ - 348/8 ನಾಟಿಂಗ್​ಹ್ಯಾಮ್​, 2019
  • ದಕ್ಷಿಣ ಆಫ್ರಿಕಾ Vs ಯುಎಇ - 314/6 ವೆಲ್ಲಿಂಗ್ಟನ್​​, 2015
  • ಪಾಕಿಸ್ತಾನ Vs ಯುಎಇ -339/6 ನೇಪಿಯರ್​​, 2015
  • ಪಾಕಿಸ್ತಾನ Vs ಶ್ರೀಲಂಕಾ - 338/5 ಸ್ವನ್​ಸೀ, 1983

ABOUT THE AUTHOR

...view details