ಕರ್ನಾಟಕ

karnataka

ETV Bharat / briefs

ಟಿಕ್​ಟಾಕ್​ ನಿಷೇಧ ವಿಚಾರ... ತ್ವರಿತ ವಿಚಾರಣೆ ಅಸಾಧ್ಯ ಎಂದ ಸುಪ್ರೀಂ

ಕಾಂಗ್ರೆಸ್ ನಾಯಕ ಹಾಗೂ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ತ್ವರಿತ ವಿಚಾರಣೆಗೆ ಮನವಿ ಮಾಡಿದ್ದರು.

ಟಿಕ್​ಟಾಕ್

By

Published : Apr 8, 2019, 12:38 PM IST

ನವದೆಹಲಿ:ಚೀನಾ ಮೂಲದ ಜನಪ್ರಿಯ ವಿಡಿಯೋ ಆ್ಯಪ್ ಟಿಕ್​ಟಾಕ್​ ಬ್ಯಾನ್ ಮಾಡಬೇಕು ಎನ್ನುವ ಮದ್ರಾಸ್ ಹೈಕೋರ್ಟ್​ ಕೇಂದ್ರಕ್ಕೆ ಮನವಿ ಮಾಡಿತ್ತು. ಈ ಆ್ಯಪ್ ಅಶ್ಲೀಲತೆಯನ್ನು ಉತ್ತೇಜಿಸುತ್ತದೆ ಎಂದು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಇಂದು ಸಲ್ಲಿಕೆ ಮಾಡಿದೆ.

ಅರ್ಜಿಯನ್ನು ಪರಿಗಣಿಸಿರುವ ಸರ್ವೋಚ್ಛ ನ್ಯಾಯಾಲಯ ತ್ವರಿತ ವಿಚಾರಣೆ ಸಾಧ್ಯವಿಲ್ಲ ಎಂದಿದೆ. ಕಾಂಗ್ರೆಸ್ ನಾಯಕ ಹಾಗೂ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ತ್ವರಿತ ವಿಚಾರಣೆಗೆ ಮನವಿ ಮಾಡಿದ್ದರು.

ಟಿಕ್​ಟಾಕ್ ಆ್ಯಪ್ ಪೋರ್ನೋಗ್ರಫಿಯನ್ನು ಉತ್ತೇಜಿಸುತ್ತದೆ, ಸಾಂಸ್ಕೃತಿಕತೆ ಧಕ್ಕೆ ತರುತ್ತದೆ ಎಂದು ಕಾರಣ ನೀಡಿ ಮುಂಬೈ ಮೂಲದ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಮುತ್ತು ಕುಮಾರ್ ಅರ್ಜಿ ಸಲ್ಲಿಸಿದ್ದರು.

ಟಿಕ್​ಟಾಕ್ ಆ್ಯಪ್​ ಮೂಲಕ ಬಳಕೆದಾರರು ವಿಡಿಯೋವನ್ನು ವಿವಿಧ ಎಫೆಕ್ಟ್​ ಮೂಲಕ ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಸದ್ಯ ಭಾರತದಲ್ಲಿ ಐದೂವರೆ ಕೋಟಿ ಬಳಕೆದಾರರನ್ನು ಹೊಂದಿದೆ.

ABOUT THE AUTHOR

...view details