ಕರ್ನಾಟಕ

karnataka

ETV Bharat / briefs

ವಾಹನ ಸವಾರರೇ ಗಮನಿಸಿ! ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರದ ಮಾಸ್ಟರ್​​ ಪ್ಲಾನ್ ಹೀಗಿದೆ​ - ಕೇಂದ್ರ ಸರ್ಕಾರ

ಮಾಲಿನ್ಯ ನಿಯಂತ್ರಣಕ್ಕಾಗಿ 2023ರಿಂದ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಕುರಿತಾಗಿ ಕರಡು ಪ್ರತಿ ತಯಾರಿ ಕಾರ್ಯದಲ್ಲಿ ಕೇಂದ್ರ  ಸಾರಿಗೆ ಸಂಪರ್ಕ ಸಚಿವ ನಿತಿನ್ ಗಡ್ಕರಿ ತೊಡಗಿದ್ದಾರೆ.

ವಾಹನ

By

Published : Jun 4, 2019, 5:54 PM IST

ನವದೆಹಲಿ:ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಹತೋಟಿಗೆ ತರುವ ಸಲುವಾಗಿ ಕೇಂದ್ರ ಸರ್ಕಾರ ನೂತನ ಯೋಜನೆಯೊಂದನ್ನು ಜಾರಿಗೆ ತರಲು ಉದ್ದೇಶಿಸಿದೆ.

ಮಾಲಿನ್ಯ ನಿಯಂತ್ರಣಕ್ಕಾಗಿ 2023ರಿಂದ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ತರುವ ಕುರಿತಾಗಿ ಕರಡು ಪ್ರತಿ ತಯಾರಿ ಕಾರ್ಯದಲ್ಲಿ ಕೇಂದ್ರ ಸಾರಿಗೆ ಸಂಪರ್ಕ ಸಚಿವರಾದ ನಿತಿನ್ ಗಡ್ಕರಿ ತೊಡಗಿದ್ದಾರೆ.

ಭಾರತದಲ್ಲಿ 2023ರಲ್ಲಿ ತ್ರಿಚಕ್ರ ವಾಹನ ಹಾಗೂ 2025ರ ವೇಳೆಗೆ ದ್ವಿಚಕ್ರ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್​​ ಅನ್ನು ಮಾರುಕಟ್ಟೆಯ ಪರಿಚಯಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಜಾರಿಗೆ ಬಂದಲ್ಲಿ 2025ರ ಏಪ್ರಿಲ್​​ನಿಂದ ಎಲೆಕ್ಟ್ರಿಕ್​​ ಬೈಕ್​​ ಹಾಗೂ ಸ್ಕೂಟರ್​ ಮಾತ್ರವೇ ಭಾರತದಲ್ಲಿ ಮಾರಾಟವಾಗಲಿದೆ.

ಸರ್ಕಾರದ ಯೋಜನೆಯಂತೆ ಕೇವಲ ಎಲೆಕ್ಟ್ರಾನಿಕ್ ತ್ರಿಚಕ್ರ ವಾಹನಗಳನ್ನು 2023ರಿಂದ ಮತ್ತು ಎಲೆಕ್ಟ್ರಾನಿಕ್ 150 ಸಿಸಿ (ಕ್ಯೂಬಿಕ್ ಸೆಂಟಿಮೀಟರ್) ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗುವುದು. ಇದು ಭಾರತದಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯಾಗಿದೆ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.

ಈಗಾಗಲೇ ಕಾರ್ಯವನ್ನು ಆರಂಭಿಸಲಾಗಿದ್ದು, ಮೊದಲ ಹಂತದ ಕಾರ್ಯಗಳು ಪೂರ್ಣಗೊಂಡ 7ರಿಂದ 10 ದಿನಗಳಲ್ಲಿ ಷೇರುದಾರನ್ನು ಸಂರ್ಪಕಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.

2018-19ರ ಹಣಕಾಸು ವರ್ಷದ ಪ್ರಕಾರ ಭಾರತದಲ್ಲಿ 21 ಮಿಲಿಯನ್ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ನೋಂದಣಿ ಪ್ರಮಾಣ ಶೇ.5ರಷ್ಟು ಹೆಚ್ಚಳವಾಗಿದೆ. ತ್ರಿಚಕ್ರ ವಾಹನಗಳ ಮಾರಾಟವೂ ಏರುಗತಿಯಲ್ಲಿದ್ದು, ಶೇ.10ರಷ್ಟು ಹೆಚ್ಚಳ ಕಂಡಿದೆ.

150ಸಿಸಿ ಸಾಮರ್ಥ್ಯದ ಬೈಕ್ ಹಾಗೂ ಸ್ಕೂಟರ್​ಗಳು ಶೇ.80ರಷ್ಟು ಮಾರಾಟವಾಗುವ ಭಾರತದಂತಹ ದೇಶದಲ್ಲಿ ಈ ನೂತನ ಕಾಯ್ದೆಯಿಂದ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಸ್ಪಂದನೆ ದೊರೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ABOUT THE AUTHOR

...view details